ವಡೋದರಾ (ಗುಜರಾತ್): ಆಮ್ ಆದ್ಮಿ ಪಕ್ಷ ಆಯೋಜಿಸಿರುವ ‘ಟೌನ್ ಹಾಲ್ ಮೀಟಿಂಗ್’ನಲ್ಲಿ ಪಾಲ್ಗೊಳ್ಳಲೆಂದು ಮಂಗಳವಾರ ಗುಜರಾತ್ನ ವಡೋದರಾಕ್ಕೆ ಆಗಮಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ‘ಮೋದಿ... ಮೋದಿ... ಮೋದಿ...’ ಘೋಷಣೆಯ ಸ್ವಾಗತ ಸಿಕ್ಕಿದೆ!

ಗುಜರಾತ್ನಲ್ಲಿ ಈ ವರ್ಷದ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಎಎಪಿಯ ಹಲವು ನಾಯಕರು ಗುಜರಾತ್ಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಅದರ ಭಾಗವಾಗಿಯೇ ಕೇಜ್ರಿವಾಲ್ ಮಂಗಳವಾರ ಗುಜರಾತ್ನ ವಡೋದರಾಕ್ಕೆ ಆಗಮಿಸಿದ್ದರು.

ವಡೋದರಾ ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದ ಕೇಜ್ರಿವಾಲ್ ಅವರ ಸುತ್ತ ಸೇರಿದ ಕೆಲ ಮಂದಿ ‘ಮೋದಿ... ಮೋದಿ... ಮೋದಿ...’ ಎಂದು ಕೂಗಿದರು. ಇದು ಕೇಜ್ರಿವಾಲ್ ಅವರಿಗೆ ಮುಜುಗರು ಉಂಟು ಮಾಡಿತು. ತಕ್ಷಣವೇ ಎಎಪಿ ಕಾರ್ಯಕರ್ತರು ‘ಕೇಜ್ರಿವಾಲ್... ಕೇಜ್ರಿವಾಲ್... ಕೇಜ್ರಿವಾಲ್...’ ಎಂದು ಘೋಷಣೆ ಮೊಳಗಿಸಿದರು.

ವಡೋದರಾಕ್ಕೆ ತಲುಪಿದ ಕೇಜ್ರಿವಾಲ್ ನಂತರ ಸುದ್ದಿಗೋಷ್ಠಿ ನಡೆಸಿದರು. ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್ನಂತೆಯೇ ಗುಜರಾತ್ನಲ್ಲಿಯೂ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುದಾಗಿ ಕೇಜ್ರಿವಾಲ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.