ನಿರ್ಬಂಧ ತೆರವು | ದೆಹಲಿ ವಾಯು ಗುಣಮಟ್ಟ ಸುಧಾರಣೆ; ನ.9ರಿಂದ ಶಾಲೆಗಳು ಪುನರಾರಂಭ

ನವದೆಹಲಿ: ದೆಹಲಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ನವೆಂಬರ್ 9ರಿಂದ ಪುನರಾರಂಭಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಸೋಮವಾರ ಪ್ರಕಟಿಸಿದ್ದಾರೆ.
ಟ್ರಕ್‌ಗಳಿಗೆ ದೆಹಲಿ ಪ್ರವೇಶಿಸದಂತೆ ಹೇರಲಾಗಿದ್ದ ನಿಷೇದ ಮತ್ತು ವರ್ಕ್ ಫ್ರಂ ಹೋಂ ಸೂಚನೆಯನ್ನು ಹಿಂಪಡೆಯಲಾಗಿದೆ. ಕಚೇರಿಗಳು ಪೂರ್ಣ ಸಾಮರ್ಥ್ಯದೊಂದಿಗೆ ಸೋವಾರದಿಂದಲೇ ಕೆಲಸ ಆರಂಭಿಸಲಿವೆ ಎಂದೂ ತಿಳಿಸಿದ್ದಾರೆ.
ಹೆದ್ದಾರಿ, ರಸ್ತೆ, ಮೇಲ್ಸೇತುವೆಗಳು, ತೂಗು ಸೇತುವೆ, ಪೈಪ್‌ಲೈನ್ ಮತ್ತು ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಕಾಮಗಾರಿಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಟ್ರಕ್‌ಗಳು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ದೆಹಲಿ ಸರ್ಕಾರ ಶುಕ್ರವಾರ ಸೂಚಿಸಿತ್ತು.
ಕೇಂದ್ರ ಮಾಲಿನ್ಯ ಮಂಡಳಿ ಅಂಕಿ ಅಂಶದ ಪ್ರಕಾರ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಸೋಮವಾರ ಬೆಳಿಗ್ಗೆ 9.10ರ ವೇಳೆಗೆ 352 ರಷ್ಟು ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.