ನವದೆಹಲಿ (ಪಿಟಿಐ): ಪೆಟ್ರೋಲ್, ಡೀಸೆಲ್ ದರ ಏರಿಕೆಯ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ದರ ತೀವ್ರ ಏರಿಕೆಯಿಂದಾಗಿ ಮಧ್ಯಮವರ್ಗದ ಜನರು ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ ಎಂದು ಹೇಳಿದ್ದಾರೆ.

ಹವಾಯಿ ಚಪ್ಪಲಿಯನ್ನು ಧರಿಸಿರುವವರೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಈಗ ಮಧ್ಯಮವರ್ಗದ ಜನರಿಗೂ ರಸ್ತೆಯಲ್ಲಿ ಚಲಿಸಲಾಗದ ಸ್ಥಿತಿಯನ್ನು ತರಲಾಗಿದೆ ಎಂದು ಟೀಕಿಸಿದ್ದಾರೆ.

ವಿಮಾನಗಳಿಗೆ ಬಳಸುವ ಎಟಿಎಫ್ ತೈಲದ ದರಕ್ಕಿಂತಲೂ ಪೆಟ್ರೋಲ್, ಡೀಸೆಲ್ ದರ ಈಗ ಮೂರು ಪಟ್ಟು ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆದ ಅವರು ಹೇಳಿದ್ದಾರೆ.

ಬಿಜೆಪಿ ಭರವಸೆ ಕುರಿತಂತೆ ಮಾಧ್ಯಮ ವರದಿಯ ಜೊತೆಗೆ ಟ್ವೀಟ್ ಮಾಡಿರುವ ಅವರು, ‘ಬಿಜೆಪಿಯು ದುಬಾರಿ ದಿನಗಳನ್ನು ತಂದಿಟ್ಟಿದೆ’ ಎಂದು ವ್ಯಂಗ್ಯಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರವನ್ನು ಭಾನುವಾರ ಲೀಟರಿಗೆ 35 ಪೈಸೆ ಏರಿಸಲಾಗಿತ್ತು.

ಇದರ ಪರಿಣಾಮ, ದ್ವಿಚಕ್ರ ವಾಹನ ಮತ್ತು ಕಾರುಗಳಿಗೆ ಬಳಸುವ ಪೆಟ್ರೋಲ್ದರವು, ವಿಮಾನಗಳಿಗೆ ಬಳಸುವ ಎಟಿಎಫ್ ತೈಲಕ್ಕಿಂತಲೂ ಶೇ 33ರಷ್ಟು ಅಧಿಕವಾಗಿದೆ. ದೆಹಲಿಯಲ್ಲಿ ಎಟಿಎಫ್ ತೈಲ ಲೀಟರಿಗೆ ₹ 79 ಇದ್ದರೆ, ಪೆಟ್ರೋಲ್ ದರ ಲೀಟರಿಗೆ ₹ 105.84 ರೂಪಾಯಿ ಆಗಿದೆ.

ಹೊಸ ಎತ್ತರದಲ್ಲಿ ಷೇರುಪೇಟೆ: 18,500 ಅಂಶ ದಾಟಿದ ನಿಫ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.