ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ ವಿಲಾಸ್ ಪಾಸ್ವಾನ್ ಪರಂಪರೆ ನಾಶಪಡಿಸಿದ ಬಿಜೆಪಿ: ದಿಗ್ವಿಜಯ್ ಸಿಂಗ್

Last Updated 11 ನವೆಂಬರ್ 2020, 6:44 IST
ಅಕ್ಷರ ಗಾತ್ರ

ಭೋಪಾಲ್: ಬಿಜೆಪಿಯು ತಂತ್ರಗಾರಿಕೆ ಮೂಲಕ ರಾಮ್ ವಿಲಾಸ್ ಪಾಸ್ವಾನ್ ಅವರ ಪರಂಪರೆಯನ್ನು ನಾಶ ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವರ್ಚಸ್ಸನ್ನು ತಗ್ಗಿಸಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಮಧ್ಯಪ್ರದೇಶ ಉಪಚುನಾವಣೆ ಮತ್ತು ಬಿಹಾರ ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಟ್ವೀಟ್ ಮಾಡಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

75 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಬಿಹಾರದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆರ್‌ಜೆಡಿಯನ್ನು ಅವರು ಅಭಿನಂದಿಸಿದ್ದಾರೆ.

‘ಸಿದ್ಧಾಂತಕ್ಕಾಗಿ ಹೋರಾಡುತ್ತಿರುವ ದೇಶದ ಒಬ್ಬನೇ ನಾಯಕ ರಾಹುಲ್ ಗಾಂಧಿ. ರಾಜಕೀಯವು ಸಿದ್ಧಾಂತಕ್ಕೆ ಸಂಬಂಧಿಸಿದ್ದು ಎಂಬುದನ್ನು ಎನ್‌ಡಿಎ ಮಿತ್ರಪಕ್ಷಗಳು ಅರ್ಥಮಾಡಿಕೊಳ್ಳಬೇಕು. ಯಾವನೇ ವ್ಯಕ್ತಿಯು ಮಹತ್ವಾಕಾಂಕ್ಷೆಯಿಂದಾಗಿ ಸಿದ್ಧಾಂತವನ್ನು ತ್ಯಜಿಸಿ ಹಾಗೂ ಸ್ವಾರ್ಥಕ್ಕಾಗಿ ರಾಜಿ ಮಾಡಿಕೊಂಡರೆ ಅಂತಹವನು ರಾಜಕೀಯದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ದಿಗ್ವಿಜಯ್ ಹೇಳಿದ್ದಾರೆ.

'ನಿತೀಶ್ ಜೀ, ಬಿಹಾರವು ನಿಮಗೆ ಸಣ್ಣದು. ನೀವು ರಾಷ್ಟ್ರ ರಾಜಕಾರಣವನ್ನು ಸೇರಬೇಕು. ಕೇಂದ್ರದ ಒಡೆದು ಆಳುವ ನೀತಿಯನ್ನು ಮುಂದುವರಿಸಲು ಬಿಡಬಾರದು. ಎಲ್ಲ ಸಮಾಜವಾದಿಗಳು ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇರಿಸುವಂತೆ ಮಾಡುವುದಕ್ಕಾಗಿ ಈ ಸಲಹೆಯನ್ನು ಪರಿಗಣಿಸಿ' ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT