ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣೋತ್ತರ ಪರೀಕ್ಷೆ ವರದಿ ಬಗ್ಗೆ ಆಕ್ರೋಶ: ಅಂಕಿತಾ ಅಂತ್ಯಕ್ರಿಯೆಗೆ ಪೋಷಕರ ನಕಾರ

Last Updated 25 ಸೆಪ್ಟೆಂಬರ್ 2022, 6:14 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಉತ್ತರಾಖಂಡ್‌ದಲ್ಲಿ ಕೊಲೆಯಾದ ರೆಸಾರ್ಟ್‌ ಸ್ವಾಗತಕಾರಿಣಿ ಅಂಕಿತಾ ಭಂಡಾರಿ ಅವರ ಮರಣೋತ್ತರ ಪರೀಕ್ಷೆಯ ಪೂರ್ಣ ವರದಿ ಬಾರದ ಹೊರತು ಅಂತಿಮ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಆಕೆಯ ಪೋಷಕರು ಭಾನುವಾರ ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಮಾತ್ರ ಲಭ್ಯವಾಗಿದ್ದು, 19 ವರ್ಷದ ಅಂಕಿತಾಳನ್ನು ನೀರಿನಲ್ಲಿ ಮುಳುಗಿಸಿ ಕೊಲ್ಲಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ರಿಷಿಕೇಶದ ‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‘ ಬಿಡುಗಡೆ ಮಾಡಿದ ಕರಡು ವರದಿಯಲ್ಲಿ ಅಂಕಿತಾ ಭಂಡಾರಿಯವರ ದೇಹದಲ್ಲಿ ‘ಆಂಟಿಮಾರ್ಟಮ್ ಗಾಯ’ಗಳು (ಸಾವಿಗೂ ಹಿಂದೆ ಆದ ಗಾಯಗಳು) ಕಂಡುಬಂದಿವೆ. ಇವು ಮೊಂಡಾದ ವಸ್ತುವಿನಿಂದಾದ ಗಾಯಗಳು. ಆದರೂ ಆಕೆಯನ್ನು ನೀರಲ್ಲಿ ಮುಳುಗಿಸಿ ಸಾಯಿಸಲಾಗಿದೆ ಎಂದು ಹೇಳಲಾಗಿದೆ.

ಅಂಕಿತಾ ಭಂಡಾರಿ ಶವ ಶನಿವಾರ ಬೆಳಗ್ಗೆ ರಿಷಿಕೇಶದ ಸಮೀಪವಿರುವ ಚೀಲಾ ಕಾಲುವೆ ಬಳಿ ಸಿಕ್ಕಿತ್ತು. ಆಕೆ ಕಾಣೆಯಾದ ಬಗ್ಗೆ ದೂರು ನೀಡಿ ಆರು ದಿನಗಳ ನಂತರ ದೇಹ ಪತ್ತೆಯಾಗಿತ್ತು.

ಶನಿವಾರ ಏಮ್ಸ್‌ನಲ್ಲಿ ನಾಲ್ವರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿತು.

ಗಾಯಗಳು ಮತ್ತು ಇತರ ಅಧ್ಯಯನ ವಿವರಗಳನ್ನು ಅಂತಿಮ ವರದಿಯಲ್ಲಿ ನೀಡಲಾಗುವುದು ಎಂದು ಕರಡು ಹೇಳಿದೆ.

ಅಂತಿಮ ವರದಿ ಬರುವವರೆಗೂ ಅಂಕಿತಾ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಆಕೆಯ ತಂದೆ ಮತ್ತು ಸಹೋದರ ಭಾನುವಾರ ಹೇಳಿದ್ದಾರೆ.

‘ತಾತ್ಕಾಲಿಕ ಮರಣೋತ್ತರ ಪರೀಕ್ಷೆಯ ವರದಿ ನಮಗೆ ಸಮಾಧಾನ ತಂದಿಲ್ಲ. ವಿವರವಾದ ಅಂತಿಮ ವರದಿ ಸಿಗುವ ವರೆಗೂ ಆಕೆಯ ಅಂತ್ಯಕ್ರಿಯೆಯನ್ನು ನಡೆಸುವುದಿಲ್ಲ’ ಎಂದು ಆಕೆಯ ತಂದೆ ವೀರೇಂದ್ರ ಸಿಂಗ್ ಭಂಡಾರಿ ಹೇಳಿದ್ದಾರೆ.

ತಾತ್ಕಾಲಿಕ ವರದಿಯಲ್ಲಿ ಸಂಪೂರ್ಣ ವಿವರಗಳು ಇಲ್ಲ ಎಂದು ಆಕೆಯ ಸಹೋದರ ಅಜಯ್ ಸಿಂಗ್ ಭಂಡಾರಿ ಅವರು ಹೇಳಿದ್ದಾರೆ.

ಅಂಕಿತಾ ಕೆಲಸ ಮಾಡುತ್ತಿದ್ದ ರೆಸಾರ್ಟ್‌ ಅನ್ನು ಕೆಡವುತ್ತಿರುವ ಕ್ರಮದ ವಿರುದ್ಧವೂ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸಾಕ್ಷ್ಯ ನಾಶಪಡಿಸುವ ಪ್ರಯತ್ನವಾಗಿರಬಹುದು ಎಂದು ಅಜಯ್ ಹೇಳಿದ್ದಾರೆ.

ಹರಿದ್ವಾರ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಒಡೆತನದ ವನಂತರಾ ರೆಸಾರ್ಟ್‌ನಲ್ಲಿ ಅಂಕಿತಾ ಕೆಲಸ ಮಾಡುತ್ತಿದ್ದರು.

ಈ ಪ್ರಕರಣದಲ್ಲಿ ಪುಲ್ಕಿತ್ ಮತ್ತು ಇತರ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ.

ಅತಿಥಿಗಳೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಕಾರಣಕ್ಕಾಗಿ ಅಂಕಿತಾಳನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಇದಕ್ಕೂ ಹಿಂದೆ ಹೇಳಿದ್ದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT