ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲುಸೋಮವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ.

ಒಂದು ವೇಳೆ ಫಾಸ್ಟ್ಯಾಗ್ ಇಲ್ಲದ ಸಂದರ್ಭದಲ್ಲಿ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ.

‘ಶುಲ್ಕ ಸಂಗ್ರಹದ ವ್ಯಾಪ್ತಿಗೆ ಬರುವ ಎಲ್ಲ ಹೆದ್ದಾರಿ, ರಸ್ತೆಗಳನ್ನು ‘ಫಾಸ್ಟ್ಯಾಗ್ ಮಾರ್ಗ‘ ಎಂದು ಪರಿಗಣಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008ರ ಅನ್ವಯ, ಫಾಸ್ಟ್ಯಾಗ್ ಇಲ್ಲದ ಅಥವಾ ಕಾರ್ಯನಿರತ ಫಾಸ್ಟ್ಯಾಗ್ ಇಲ್ಲದ ವಾಹನಗಳ ಮಾಲೀಕರು, ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ‘ ಎಂದು ಸಚಿವಾಲಯದ ಆದೇಶ ತಿಳಿಸಿದೆ.

ಹಿಂದೆ ಈ ವರ್ಷದ ಜನವರಿ 1ರಿಂದಲೇ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದನ್ನು ಕಡ್ಡಾಯ ಮಾಡಲಾಗಿತ್ತು. ಬಳಿಕ ಅದನ್ನು ಫೆಬ್ರುವರಿ 15ಕ್ಕೆ ಮುಂದೂಡಲಾಗಿತ್ತು. ಫಾಸ್ಟ್ಯಾಗ್ ಬಳಕೆ ಕಡ್ಡಾಯವಾಗುವಂತೆ ಎಲ್ಲ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದೂ ಸಚಿವಾಲಯವು, ರಾಜ್ಯಗಳ ಸಂಬಂಧಿತ ಇಲಾಖೆಗಳಿಗೆ ಸೂಚಿಸಿತ್ತು.

ಭೂಸಾರಿಗೆ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಈ ಸಂಬಂಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಫಾಸ್ಟ್ಯಾಗ್ ಬಳಕೆಯು ಶುಲ್ಕ ವಸೂಲಿ ಕೇಂದ್ರಗಳಲ್ಲಿ ಕಾಯುವಿಕೆಯ ಅವಧಿಯನ್ನು ಕುಗ್ಗಿಸಲಿದೆ. ಇಂಧನ ಉಳಿತಾಯ ಹಾಗೂ ವಾಯುಮಾಲಿನ್ಯ ಪ್ರಮಾಣವು ಕುಗ್ಗಲೂ ನೆರವಾಗಲಿದೆ ಎಂದು ಹೇಳಿದ್ದಾರೆ.

ಸದ್ಯ, ಫಾಸ್ಟ್ಯಾಗ್ ಬಳಕೆದಾರರ ಸಂಖ್ಯೆ 2.54 ಕೋಟಿ ಇದೆ. ಒಟ್ಟು ಶುಲ್ಕದ ಶೇ 80ರಷ್ಟು ಈ ಮೂಲಕ ಸಂಗ್ರಹವಾಗಲಿದೆ. ಫಾಸ್ಟ್ಯಾಗ್ ಮೂಲಕ ಸಂಗ್ರಹವಾಗುವ ಶುಲ್ಕದ ಮೊತ್ತ ದೈನಿಕ ₹ 89 ಕೋಟಿ ಗಡಿಯನ್ನು ದಾಟಿದೆ. ಎನ್ಎಚ್ಎಐ ಮೂಲಗಳ ಪ್ರಕಾರ, ಇನ್ನೂ ಎರಡು ಕೋಟಿಯಷ್ಟು ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳಿಗೆ ಫಾಸ್ಟ್ಯಾಗ್ ಅಳವಡಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.