ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19ಗೆ ಚಿಕಿತ್ಸೆ: ‘ಟಿಕೊಪ್ಲ್ಯಾನಿನ್‌’ ಹೆಚ್ಚು ಪರಿಣಾಮಕಾರಿ

ಐಐಟಿ–ದೆಹಲಿ ಸಂಶೋಧಕರ ಪ್ರತಿಪಾದನೆ
Last Updated 28 ಸೆಪ್ಟೆಂಬರ್ 2020, 7:15 IST
ಅಕ್ಷರ ಗಾತ್ರ

ನವದೆಹಲಿ: ಬ್ಯಾಕ್ಟೀರಿಯಾದಿಂದಾಗುವ ಸೋಂಕು ನಿವಾರಣೆಗೆ ಬಳಸಲಾಗುವ ಔಷಧಿ‘ಟಿಕೊಪ್ಲ್ಯಾನಿನ್‌’, ಕೋವಿಡ್‌–19 ಚಿಕಿತ್ಸೆಯಲ್ಲೂ ಹೆಚ್ಚು ಪರಿಣಾಮಕಾರಿ ಎಂದು ಐಐಟಿ–ದೆಹಲಿ ಸಂಶೋಧಕರು ಪ್ರತಿಪಾದಿಸಿದ್ದಾರೆ.

ಅಮೆರಿಕದ ‘ಫುಡ್‌ ಆ್ಯಂಡ್‌ ಡ್ರಗ್ಸ್‌ ಅಥಾರಿಟಿ’ (ಎಫ್‌ಡಿಎ) ಅನುಮೋದಿತ‘ಟಿಕೊಪ್ಲ್ಯಾನಿನ್‌’ ಪ್ರಸ್ತುತ ಕೋವಿಡ್‌–19 ವಿರುದ್ಧ ಬಳಸುತ್ತಿರುವ ಇತರ ಔಷಧಿಗಳಿಗಿಂತ ಹಲವು ಪಟ್ಟು ಹೆಚ್ಚು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಐಐಟಿ–ದೆಹಲಿ ಪ್ರಾಧ್ಯಾಪಕ ಅಶೋಕ್‌ ಪಟೇಲ್ ಹೇಳುತ್ತಾರೆ.

‘ಐಐಟಿಯ ಕುಸುಮಾ ಸ್ಕೂಲ್‌ ಆಫ್‌ ಬಯಾಲಜಿಕಲ್ ಸೈನ್ಸಸ್‌ನಲ್ಲಿ ಸಂಶೋಧನೆ ನಡೆಸಲಾಗಿದೆ. ಸಾರ್ಸ್‌–ಕೋವ್‌–2 ಸೋಂಕು ಚಿಕಿತ್ಸೆಗೆ ಬಳಸುವ ಲೊಪಿನಾವಿರ್‌, ಹೈಡ್ರಾಕ್ಸಿಕ್ಲೋರೊಕ್ವಿನ್‌ಗಿಂತಲೂ ‘ಟಿಕೊಪ್ಲ್ಯಾನಿನ್‌’ 10–20 ಪಟ್ಟು ಪರಿಣಾಮಕಾರಿ ಎಂಬುದು ದೃಢಪಟ್ಟಿದೆ’ ಎಂದು ಹೇಳಿದ್ದಾರೆ.

ಎಐಐಎಂಎಸ್‌ನ ಡಾ.ಪ್ರದೀಪ್‌ ಶರ್ಮಾ ಅವರೂ ಸಂಶೋಧನಾ ತಂಡದಲ್ಲಿದ್ದು, ಅಧ್ಯಯನ ವರದಿ ‘ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಬಯಾಲಜಿಕಲ್ ಮ್ಯಾಕ್ರೊಮಾಲೆಕ್ಯೂಲ್ಸ್‌’ ಎಂಬ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT