ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಬಿಜೆಪಿ ಅಭ್ಯರ್ಥಿಗಳಾಗಿ ಇಬ್ಬರು ಮುಸ್ಲಿಂ ಮಹಿಳೆಯರ ಸ್ಪರ್ಧೆ

Last Updated 24 ನವೆಂಬರ್ 2020, 10:21 IST
ಅಕ್ಷರ ಗಾತ್ರ

ಮಲಪ್ಪುರಂ (ಕೇರಳ): ರಾಜ್ಯದ ಚುನಾವಣೆಯ ಇತಿಹಾಸದಲ್ಲಿಯೇ ಬಿಜೆಪಿ ಇದೇ ಮೊದಲ ಬಾರಿಗೆ ಇಬ್ಬರು ಮುಸ್ಲಿಂ ಮಹಿಳೆಯರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದೆ.

ಮುಸ್ಲಿಂ ಪ್ರಾಬಲ್ಯವುಳ್ಳ ಮಲಪ್ಪುರಂ ಜಿಲ್ಲೆಯಲ್ಲಿ ಬಿಜೆಪಿಯ ಈ ಅನಿರೀಕ್ಷಿತ ನಡೆಯನ್ನು ಚುನಾವಣೆ ಗೆಲ್ಲುವ ಕಾರ್ಯತಂತ್ರ ಎಂದೇ ಹೇಳಲಾಗಿದೆ. ಈ ಜಿಲ್ಲೆಯು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್‌)ನ ಭದ್ರಕೋಟೆಯಾಗಿದೆ.

ಬಿಜೆಪಿ ಅಭ್ಯರ್ಥಿಗಳಾಗಿ ಅನೇಕ ಪುರುಷ ಅಭ್ಯರ್ಥಿಗಳು ಕಣದಲ್ಲಿದ್ದರೂ, ಪಕ್ಷದ ಅಭ್ಯರ್ಥಿಗಳಾಗಿ ಇಬ್ಬರು ಮುಸ್ಲಿಂ ಮಹಿಳೆಯರೂ ಕಣಕ್ಕಿಳಿದಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ವಂಡೂರ್ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 6ರಿಂದ ಟಿ.ಪಿ.ಸುಲ್‌ಫತ್, ಪೊನ್ಮುಂಡಂ ಗ್ರಾಮ ಪಂಚಾಯಿತಿಯ 9ನೇ ವಾರ್ಡ್‌ನಿಂದ ಆಯಿಷಾ ಹುಸೇನ್ ಸ್ಪರ್ಧೆಯಲ್ಲಿದ್ದಾರೆ.

ತ್ರಿವಳಿ ತಲಾಖ್‌ ರದ್ದು ಮತ್ತು ಮದುವೆಗೆ ಮಹಿಳೆಯರ ವಯೋಮಿತಿಯನ್ನು 18 ರಿಂದ 21 ವರ್ಷಕ್ಕೆ ಏರಿಸಿರುವುದು ನನ್ನ ಮೇಲೆ ಪ್ರಭಾವ ಬೀರಿದ ಎರಡು ಅಂಶಗಳು. ಮುಸ್ಲಿಂ ಮಹಿಳೆಯರ ಏಳಿಗೆ ದೃಷ್ಟಿಯಿಂದ ಇವು ದಿಟ್ಟ ನಿರ್ಧಾರಗಳು ಎಂದು ಸುಲ್‌ಫತ್ಅಭಿಪ್ರಾಯಪಡುತ್ತಾರೆ. 15ನೇ ವಯಸ್ಸಿಗೆ ಮದುವೆಯಾಗಿರುವ ಅವರಿಗೆ ಇಬ್ಬರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT