ಶನಿವಾರ, ಆಗಸ್ಟ್ 13, 2022
24 °C

ಮೂವತ್ತು ವರ್ಷಗಳಲ್ಲಿ ಲಡಾಖ್ ಸಮಗ್ರ ಪ್ರಗತಿಗೆ ಕ್ರಿಯಾಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಲಡಾಖ್ ಅನ್ನು ಮುಂದಿನ 30 ವರ್ಷಗಳಲ್ಲಿ ಸಮಗ್ರವಾಗಿ ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ‘ಸಮಗ್ರ ಕ್ರಿಯಾಯೋಜನೆ 2050’ ಅನ್ನು ರೂಪಿಸಿದೆ.

ಕ್ರಿಯಾಯೋಜನೆಯ ಕೈಪಿಡಿ ಅನುಸಾರ, ವಿರಳ ಜನಸಂಖ್ಯೆಯುಳ್ಳ ಲಡಾಖ್‌ ಪ್ರಮುಖ ಕ್ಷೇತ್ರಗಳಾದ ಸಾಮಾಜಿಕ ಕಲ್ಯಾಣ, ಮಾನವ ಸಂಪನ್ಮೂಲ ಅಭಿವೃದ್ಧಿ, ಮೂಲಸೌಕರ್ಯ, ಸಾರ್ವಜನಿಕ ಆರೋಗ್ಯ, ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಕೃಷಿಯಲ್ಲಿ ಹಿಂದುಳಿದಿದೆ.

ಲಡಾಖ್‌ಗೆ ಶೇ70ರಷ್ಟು ಧಾನ್ಯ ಆಮದಾಗುತ್ತಿದೆ. ಕೃಷಿ ಆದಾಯ ಶೇ 2ರಷ್ಟು ಭೂಮಿಗೆ ಸೀಮಿತವಾಗಿದೆ. ಗುಣಮಟ್ಟದ ಡಿಜಿಟಲ್‌ ಸೇವೆಯು ಲೇಹ್‌ ಮತ್ತು ಕಾರ್ಗಿಲ್ ಪಟ್ಟಣಗಳಿಗಷ್ಟೇ ಲಭ್ಯವಾಗುತ್ತಿದೆ. ಗುಣಮಟ್ಟದ ವೈದ್ಯಕೀಯ ಆರೈಕೆ ಸೇವೆಯ ಕೊರತೆ ಇದೆ. ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಯಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ವಿರಳವಾಗಿದೆ. ಈ ಸಮಸ್ಯೆ, ಕೊರತೆಗಳನ್ನು ಬಗೆಹರಿಸಿ, ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಎಂದು ಕ್ರಿಯಾಯೋಜನೆಯಲ್ಲಿ ಅಭಿಪ‍್ರಾಯಪಡಲಾಗಿದೆ.

ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕವಾಗಿಸಿ ಕಳೆದ ವರ್ಷ ಆ.5ರಂದು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾಗಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು