ಮಂಗಳವಾರ, ಜೂನ್ 28, 2022
21 °C

ಜಮ್ಮು ಮತ್ತು ಕಾಶ್ಮೀರದ ಅರಣ್ಯದಲ್ಲಿ ಕಾಳ್ಗಿಚ್ಚು: ನೆಲಬಾಂಬ್‌ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಅರಣ್ಯವೊಂದರಲ್ಲಿ ಕಾಣಿಸಿಕೊಂಡ ಬೆಂಕಿಯು ಇಲ್ಲಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಯುದ್ದಕ್ಕೂ ಹಲವು ಕಡೆ ನೆಲಬಾಂಬ್‌ ಸ್ಫೋಟಕ್ಕೆ ಕಾರಣವಾಗಿದೆ.

‘ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡ ಅರಣ್ಯದಲ್ಲಿ ಸೋಮವಾರ (ಮೇ.16) ಕಾಣಿಸಿಕೊಂಡ ಬೆಂಕಿಯು ಭಾರತದ ಭೂಭಾಗದ ಮೆಂದಾರ್‌ ವಲಯಕ್ಕೂ ವ್ಯಾಪಿಸಿದೆ.ಬೆಂಕಿಯಿಂದ ಸುಮಾರು ಅರ್ಧ ಡಜನ್‌ ನೆಲಬಾಂಬ್‌ ಸ್ಫೋಟಕ್ಕೆ ಕಾರಣವಾಗಿದ್ದು, ಇದು ಒಳಸುಳುವಿಕೆ ವಿರೋಧಿ ತಡೆ ವ್ಯವಸ್ಥೆ ಭಾಗವಾಗಿತ್ತು’ ಎಂದು ಅಧಿಕಾರಿಗಳು ತಿಳಿಸಿದರು.‌‌

‘ಕಳೆದ ಮೂರು ದಿನಗಳಿಂದ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಸೇನೆಯೊಂದಿಗೆ ಬೆಂಕಿಯನ್ನು ನಂದಿಸುವ ಕೆಲಸ ಮಾಡುತ್ತಿದ್ದೇವೆ. ಬೆಂಕಿ ನಿಯಂತ್ರಣಕ್ಕೆ ಬಂದಿತ್ತು ಆದರೆ ಇಂದು ಮುಂಜಾನೆ ದರಮಶಾಲ್‌ ಬ್ಲಾಕ್‌ನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು.ಅತಿಯಾದ ಗಾಳಿಯಿಂದ ಬೆಂಕಿಯು ವೇಗವಾಗಿ ಗಡಿ ಭಾಗದ ಕುಗ್ರಾಮಗಳಿಗೂ ಹರಡತೊಡಗಿತು. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಅರಣ್ಯ ರಕ್ಷಕ ಕಾನರ್‌ ಹುಸೇನ್‌ ಶಾ ತಿಳಿಸಿದರು.

‘ರಾಜೋರಿ ಜಿಲ್ಲೆಯ ಗಡಿ ಸಮೀಪದ ಸುಂದರಬಂಡಿ ಪ್ರದೇಶದಲ್ಲಿ ಬುಧವಾರ ಮತ್ತೊಂದು ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಗಂಭೀರ್, ಮೊಘಲಾ ಸೇರಿ ಇತರ ಅರಣ್ಯ ಪ್ರದೇಶಗಳಿಗೆ ವ್ಯಾಪಿಸಿದೆ. ಕಲಕೋಟೆಯ ಕಾಳಾರ್, ರಂತಾಲ್, ಚಿಂಗಿ ಅರಣ್ಯಗಳಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಬಿಎಸ್‌ಎಫ್‌ನ ಬೆಲಿ ಅಜ್ಮತ್ ಬೋರರ್ ಗಡಿ ಚೌಕಿ ಸಮೀಪದ ಎಲ್‌ಒಸಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು,ನಿಯಂತ್ರಣಕ್ಕೆ ತರಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು