ಶುಕ್ರವಾರ, ಮಾರ್ಚ್ 24, 2023
30 °C

ಅರುಣಾಚಲಪ್ರದೇಶದಲ್ಲಿ ಸೇನೆಯ ಹೆಲಿಕಾಪ್ಟರ್‌ ಪತನ; ಮೃತರ ಸಂಖ್ಯೆ ನಾಲ್ಕಕ್ಕೆ ಏರಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಇಟಾನಗರ, ಅರುಣಾಚಲ ಪ್ರದೇಶ: ಅರುಣಾಚಲಪ್ರದೇಶದ ಅಪ್ಪರ್‌ ಸಿಯಾಂಗ್ ಜಿಲ್ಲೆಯಲ್ಲಿ ಸೇನೆಯ ‘ಸುಧಾರಿತ ಲಘು ಹೆಲಿಕಾಪ್ಟರ್‌’ (ಎಎಲ್‌ಎಚ್‌) ಶುಕ್ರವಾರ ಪತನಗೊಂಡಿದೆ. ದುರಂತದಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದು, ಇನ್ನೊಬ್ಬರು ನಾಪತ್ತೆಯಾಗಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಐವರು ಸಿಬ್ಬಂದಿ ಇದ್ದ ಹೆಲಿಕಾಪ್ಟರ್‌ ದೈನಂದಿನ ತಾಲೀಮಿನಲ್ಲಿ ತೊಡಗಿದ್ದ ಸಂದರ್ಭದಲ್ಲಿ (ಬೆಳಿಗ್ಗೆ 10.43ಕ್ಕೆ) ಮಿಗ್ಗಿಂಗ್‌ ಎಂಬ ಹಳ್ಳಿಯ ಸಮೀಪ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ನಾಲ್ಕು ಶವಗಳು ಸಿಕ್ಕಿವೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ಪತನವಾಗಿರುವ ಸ್ಥಳವು ಚೀನಾ ಗಡಿಯಿಂದ 35 ಕಿ.ಮೀ.ದೂರದಲ್ಲಿದ್ದು, ಪರ್ವತಗಳಿಂದ ಕೂಡಿದೆ. ಸೇನೆ ಮತ್ತು ವಾಯು ಪಡೆಗಳು ಜಂಟಿಯಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

ರಾಜ್ಯದಲ್ಲಿ ಈ ತಿಂಗಳು ಸೇನೆಯ ಹೆಲಿಕಾಪ್ಟರ್‌ ಪತನಗೊಂಡ ಎರಡನೇ ದುರಂತ ಇದಾಗಿದೆ. ಅಕ್ಟೋಬರ್ 5ರಂದು ತವಾಂಗ್‌ ಜಿಲ್ಲೆಯಲ್ಲಿ ಚೀತಾ ಹೆಲಿಕಾಪ್ಟರ್‌ ಪತನವಾಗಿ, ಒಬ್ಬ ಪೈಲಟ್ ಮೃತಪಟ್ಟಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು