ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾನವಾಗಿ ನೀಡಲು ಹೆಣ್ಣು ಆಸ್ತಿಯಲ್ಲ: ನ್ಯಾಯಾಲಯ ಅಭಿಪ್ರಾಯ

Last Updated 28 ಜನವರಿ 2022, 16:36 IST
ಅಕ್ಷರ ಗಾತ್ರ

ಮುಂಬೈ: ‘ಹೆಣ್ಣು ಮಗು ದಾನವಾಗಿ ನೀಡಬಹುದಾದ ಆಸ್ತಿಯಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ಅಭಿಪ್ರಾಯಪಟ್ಟಿದೆ.

ವ್ಯಕ್ತಿಯೊಬ್ಬ ಸ್ವಯಂಘೋಷಿತ ದೇವಮಾನವನೊಬ್ಬನಿಗೆ ತನ್ನ 17 ವರ್ಷದ ಮಗಳನ್ನು ‘ದಾನ’ ಮಾಡಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ದೇವಮಾನವ ಶಂಕೇಶ್ವರ ಧಾಕ್ನೆ ಮತ್ತು ಅವರ ಶಿಷ್ಯ ಸೋಪಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ವಿಭಾ ಕಂಕಣವಾಡಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಬ್ಬರು ಆರೋಪಿಗಳು ಬಾಲಕಿ ಮತ್ತು ಆಕೆಯ ತಂದೆಯೊಂದಿಗೆ ಜಲ್ನಾ ಜಿಲ್ಲೆಯ ಬದ್ನಾಪುರದ ದೇವಸ್ಥಾನದಲ್ಲಿ ವಾಸಿಸುತ್ತಿದ್ದಾರೆ. ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರ ವಿರುದ್ಧ ಬಾಲಕಿಯು ಆಗಸ್ಟ್ 2021 ರಲ್ಲಿ ಎಫ್‌ಐಆರ್ ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಬಾಲಕಿಯನ್ನು ಸ್ವಯಂಘೋಷಿತ ದೇವ ಮಾನವನಿಗೆ 2018ರಲ್ಲಿ ದಾನವಾಗಿ ನೀಡಿರುವ ‘ದಾನಪತ್ರ’ವನ್ನು ನ್ಯಾಯಮೂರ್ತಿಗಳು ವಿಚಾರಣೆ ವೇಳೆ ಗಮನಿಸಿದರು. ₹100 ಛಾಪಾ ಖಾಗದಲ್ಲಿ ಬಾಲಕಿಯನ್ನು ದಾನವಾಗಿ ನೀಡಿರುವುದಾಗಿ ಉಲ್ಲೇಖಿಸಲಾಗಿತ್ತು.


‘ಹುಡುಗಿಯ ತಂದೆ ತನ್ನ ಮಗಳನ್ನು ದಾನವಾಗಿ ಬಾಬಾಗೆ ನೀಡಿದ್ದಾನೆ ಎಂದು ಹೇಳಲಾಗಿದೆ. ಮತ್ತು, ದೇವರ ಸನ್ನಿಧಿಯಲ್ಲಿ 'ಕನ್ಯಾದಾನ'ವನ್ನು ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಹುಡುಗಿ ಅಪ್ರಾಪ್ತಳಾಗಿರುವಾಗ, ತಂದೆ ಅದ್ಹೇಗೆ ದಾನ ಮಾಡಲು ಸಾಧ್ಯ? ಎಂದು ನ್ಯಾಯಾಲಯ ಪ್ರಶ್ನೆ ಮಾಡಿತು.

‘ದಾನ ಮಾಡಲು ಹೆಣ್ಣು ಒಂದು ಆಸ್ತಿಯಲ್ಲ’ ಎಂದು ನ್ಯಾಯಮೂರ್ತಿ ಕಂಕಣವಾಡಿ ಹೇಳಿದರು. ಇದು ಆಘಾತಕಾರಿ ಸಂಗತಿಯಾಗಿದೆ. ನ್ಯಾಯಾಲಯವು ಅಪ್ರಾಪ್ತ ಬಾಲಕಿಯ ಭವಿಷ್ಯದ ಬಗ್ಗೆ ಚಿಂತಿಸುತ್ತದೆ’ ಎಂದೂ ನ್ಯಾಯಾಲಯ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT