ಮುಸ್ಲಿಂ ಮಹಿಳೆಯರಿಗೆ ಟಿಕೆಟ್ ಧರ್ಮಕ್ಕೆ ವಿರುದ್ಧ : ಶಾಹಿ ಇಮಾಮ್ ಹೇಳಿಕೆ

ಅಹಮದಾಬಾದ್: ಚುನಾವಣೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಟಿಕೆಟ್ ನೀಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಹಾಗೂ ಇದು ಧರ್ಮವನ್ನು ದುರ್ಬಲಗೊಳಿಸುತ್ತದೆ ಎಂದು ಅಹಮದಾಬಾದ್ನ ಜಾಮಾ ಮಸೀದಿಯ ಶಾಹಿ ಇಮಾಮ್ ಭಾನುವಾರ ಹೇಳಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಸುತ್ತಿನ ಮತ್ತು ಅಂತಿಮ ಹಂತದ ಮತದಾನದ ಮುನ್ನ ದಿನ ಮಾಧ್ಯಮದವರೊಂದಿಗೆ ಮಾತನಾಡಿದ ಶಾಹಿ ಇಮಾಮ್, ಇಸ್ಲಾಂನಲ್ಲಿ ಮಹಿಳೆಯರಿಗೆ ಒಂದು ನಿರ್ದಿಷ್ಟ ಸ್ಥಾನ ಇರುವುದರಿಂದ ಅವರಿಗೆ ಮಸೀದಿ ಒಳಗೆ ಪ್ರವೇಶ ಇಲ್ಲ ಹಾಗೂ ನಮಾಜ್ (ಪ್ರಾರ್ಥನೆ) ಮಾಡಲು ಅವಕಾಶ ಇಲ್ಲ. ಇದುವರೆಗೆ ಯಾವುದಾದರೂ ಮಹಿಳೆಯರು ನಮಾಜ್ ಮಾಡುವುದನ್ನು ನೋಡಿದ್ದೀರಾ? ಹಾಗಾಗಿ ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಇಸ್ಲಾಂ ವಿರುದ್ಧವಾಗಿರುತ್ತದೆ. ಚುನಾವಣಾ ಟಿಕೆಟ್ ಅನ್ನು ನೀಡಲು ಪುರುಷ ಅಭ್ಯರ್ಥಿಗಳು ಲಭ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.