ಮಹದಾಯಿ ನದಿ ವಿವಾದ: ಮುಖ್ಯಮಂತ್ರಿ ಬೆಂಬಲಿಸುವಂತೆ ಗೋವಾ ಸಚಿವರಿಂದ ಮನವಿ

ಪಣಜಿ: ಮಹದಾಯಿ ನದಿ ಹೋರಾಟ ಕುರಿತಂತೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ಗೆ ಪ್ರಜೆಗಳು ಬೆಂಬಲ ನೀಡಬೇಕು ಗೋವಾ ಸರ್ಕಾರದ ಇಬ್ಬರು ಸಚಿವರು ಗುರುವಾರ ಹೇಳಿದ್ದಾರೆ.
ಗೋವಾ ಸಮ್ಮಿಶ್ರ ಸರ್ಕಾರದ ಕ್ರೀಡಾ ಸಚಿವ ಗೋವಿಂದ್ ಗೌಡೆ, ಪ್ರವಾಸೋದ್ಯಮ ಸಚಿವ ರೋಹನ್ ಖೌಂಟೆ ಅವರು ಗೋವಾ ಜನರಲ್ಲಿ ಈ ಮನವಿ ಮಾಡಿದ್ದಾರೆ.
ಕರ್ನಾಟಕ ಮತ್ತು ಗೋವಾ ನಡುವಿನ ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ತೀವ್ರಗೊಂಡ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಮಹದಾಯಿ ನದಿಯನ್ನು ಉಳಿಸಲು ಗೋವಾದ ಜನರು ಒಗ್ಗೂಡಬೇಕು, ಎಲ್ಲರೂ ಮುಖ್ಯಮಂತ್ರಿ ಅವರನ್ನು ಬೆಂಬಲಿಸಬೇಕು ಎಂದು ಗೋವಿಂದ್ ಗೌಡೆ ಹೇಳಿದ್ದಾರೆ.
ಗೋವಾದ ಜನರಿಗೆ ಮಹಾದಾಯಿ ನದಿ ತಾಯಿ ಇದ್ದಂತೆ, ಅದರ ಉಳಿವಿಗಾಗಿ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕು. ಯಾರಾದರೂ ಸಂವಿಧಾನವನ್ನು ಪಾಲಿಸದಿದ್ದರೆ ಅವರ ವಿರುದ್ಧ ದಂಗೆ ಏಳಬೇಕಾಗುತ್ತದೆ ಎಂದು ಸಚಿವ ರೋಹನ್ ಖೌಂಟೆ ಹೇಳಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮತ್ರಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಮದು ಸಚಿವ ರೋಹನ್ ಖೌಂಟೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.