ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಉತ್ಪಾದನೆ ಹೆಚ್ಚಿಸಲು ಭಾರತ್ ಬಯೋಟೆಕ್ ಬೆಂಗಳೂರು ಘಟಕಕ್ಕೆ ನೆರವು: ಕೇಂದ್ರ

Last Updated 12 ಮೇ 2021, 12:04 IST
ಅಕ್ಷರ ಗಾತ್ರ

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆ ಉತ್ಪಾದನೆಯ ವೇಗ ಹೆಚ್ಚಿಸಲು ಹಣಕಾಸು ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

‘ಭಾರತ್ ಬಯೋಟೆಕ್‌’ ಕಂಪನಿಯ ಬೆಂಗಳೂರಿನ ಹೊಸ ಘಟಕಕ್ಕೆ ಅಂದಾಜು ₹65 ಕೋಟಿ ಹಣಕಾಸು ನೆರವು ಘೋಷಿಸಲಾಗಿದೆ. ಲಸಿಕೆ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳೂ ಬೆಂಬಲ ನೀಡಿವೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹೇಳಿರುವುದಾಗಿ ‘ಎಎನ್‌ಐ’ ಟ್ವೀಟ್ ಮಾಡಿದೆ.

ಕೊವ್ಯಾಕ್ಸಿನ್ ಲಸಿಕೆಯ ಈಗಿನ ಉತ್ಪಾದನಾ ಸಾಮರ್ಥ್ಯವನ್ನು ಮೇ–ಜೂನ್ ಅವಧಿಗೆ ದ್ವಿಗುಣಗೊಳಿಸಲಾಗುವುದು. ಜುಲೈ–ಆಗಸ್ಟ್ ಅವಧಿ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು 6–7 ಪಟ್ಟು ಹೆಚ್ಚಿಸಲಾಗುವುದು. ಸೆಪ್ಟೆಂಬರ್‌ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು ತಿಂಗಳಿಗೆ 10 ಕೋಟಿ ಡೋಸ್‌ಗೆ ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT