ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕೋವಿಡ್‌ 19‘ ಲಸಿಕೆ ವಿತರಣೆಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ ?

ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
Last Updated 11 ನವೆಂಬರ್ 2020, 7:16 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರತಿಯೊಬ್ಬ ಭಾರತೀಯನಿಗೂ ‘ಕೋವಿಡ್‌ 19‘ ಲಸಿಕೆಯನ್ನು ತಲುಪಿಸಲು ಯಾವ ರೀತಿ ಕಾರ್ಯತಂತ್ರ ರೂಪಿಸಲಾಗಿದೆ ಎಂಬುದನ್ನು ಸರ್ಕಾರ ವಿವರಿಸಬೇಕು‘ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

‘ತಮ್ಮ ಕಂಪನಿ ತಯಾರಿಸಿರುವ ಲಸಿಕೆ, ‘ಕೋವಿಡ್ 19‘ ಸೋಂಕಿನ ವಿರುದ್ಧ ಶೇ 90ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ‘ ಎಂದು ಫಿಜರ್ ಇಂಗ್ ಮತ್ತು ಬಯೋಟೆಕ್ ಎಸ್‌ಇ ಸಂಸ್ಥೆ ಕುರಿತ ವರದಿ ಪ್ರಕಟವಾದ ನಂತರ ರಾಹುಲ್ ಗಾಂಧಿ ಸರ್ಕಾರವನ್ನು ಈ ರೀತಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಟ್ವೀಟ್‌ನೊಂದಿಗೆ ‘ಫಿಜರ್ ಸಂಸ್ಥೆಯ ಲಸಿಕೆ ಕುರಿತು ಪ್ರಕಟವಾಗಿರುವ ವರದಿಯನ್ನು ಲಗತ್ತಿಸಿದ್ದಾರೆ.

‘ಫಿಜರ್‌ ಸಂಸ್ಥೆ ಭರವಸೆಯುಳ್ಳ ಲಸಿಕೆಯನ್ನು ತಯಾರಿಸಿದ್ದರೂ, ಅದನ್ನು ಪ್ರತಿಯೊಬ್ಬ ಭಾರತೀಯನಿಗೂ ತಲುಪಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಿದೆ‘ ಎಂದು ರಾಹುಲ್‌ ಒತ್ತಾಯಿಸಿದ್ದಾರೆ. ‘ಕೇಂದ್ರ ಸರ್ಕಾರ ಈ ಲಸಿಕೆಯನ್ನು ಯಾವ ಕಾರ್ಯತಂತ್ರದ ಮೂಲಕ ಪ್ರತಿಯೊಬ್ಬ ಭಾರತೀಯನಿಗೂ ತಲುಪಿಸುತ್ತದೆ ಎಂಬುದನ್ನು ಬಹಿರಂಗಪಡಿಸಬೇಕು‘ ಎಂದು ಕೇಳಿದ್ದಾರೆ.

‘ಲಸಿಕೆ ಸಾಗಿಸಲು ‘ಮೈನಸ್ 70 ಡಿಗ್ರಿ‘ ತಾಪಮಾನದ ‘ಕೋಲ್ಡ್ ಚೈನ್ ಲಾಜಿಸ್ಟಿಕ್‌‘(ಶೀತಲಗೃಹ ಸರಪಳಿ) ಸೌಲಭ್ಯದ ಅಗತ್ಯವಿದೆ. ಆದರೆ, ಸದ್ಯ ನಮ್ಮ ದೇಶದಲ್ಲಿರುವ ಯಾವ ಕಂಪನಿಗಳಲ್ಲೂ ಇಂಥ ಸೌಲಭ್ಯವಿಲ್ಲ‘ ಎಂದು ಟ್ವೀಟ್‌ನಲ್ಲಿ ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT