ಭಾನುವಾರ, ಜೂನ್ 13, 2021
23 °C

ಮನೆಬಾಗಿಲಿಗೇ ಬಂದು ಲಸಿಕೆ ಕೊಡಲಿದೆ ಚೆನ್ನೈ ಮಹಾನಗರ ಪಾಲಿಕೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

PTI Photo

ಚೆನ್ನೈ: ಮೆಟ್ರೋ ನಗರಗಳಲ್ಲಿ ಲಸಿಕೆ ಅಭಿಯಾನ ಆರಂಭವಾಗಿದೆ. ಆದರೆ ಲಾಕ್‌ಡೌನ್ ನಿರ್ಬಂಧಗಳಿಂದಾಗಿ ಪ್ರಯಾಣಕ್ಕೆ ಸಮಸ್ಯೆಯಾಗಿರುವುದರಿಂದ ಜನರ ಅನುಕೂಲಕ್ಕಾಗಿ ಬೃಹತ್ ಚೆನ್ನೈ ಪಾಲಿಕೆ (ಜಿಸಿಸಿ) ಜನರ ಮನೆಬಾಗಿಲಿಗೇ ಬಂದು ಲಸಿಕೆ ಕೊಡುವುದಾಗಿ ಹೇಳಿದೆ.

ಅಪಾರ್ಟ್‌ಮೆಂಟ್, ವಸತಿ ಸಮುಚ್ಛಯ ಮತ್ತು ಹೆಚ್ಚು ಜನರು ಒಂದೆಡೆ ಸೇರಬಹುದಾದ ಸ್ಥಳವಿದ್ದರೆ ಅಂತಹ ತಾಣಕ್ಕೆ ಬಂದು ಜನರಿಗೆ ಲಸಿಕೆ ನೀಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಚೆನ್ನೈ ಪಾಲಿಕೆ ಸೋಮವಾರ ತಿಳಿಸಿದೆ.

ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆಯಲ್ಲಿ ಲಸಿಕೆ ನೀಡಲು ಪಾಲಿಕೆ ಮುಂದಾಗಿದೆ. 45ಕ್ಕಿಂತ ಕಡಿಮೆ ವಯಸ್ಸಿನವರಿಗೆ ಮುಂದಿನ ಹಂತದಲ್ಲಿ ಲಸಿಕೆ ನೀಡುವ ಯೋಜನೆಯಿದೆ ಎಂದು ಪಾಲಿಕೆ ಹೇಳಿದೆ.

ಜನರು ಲಸಿಕೆ ಪಡೆಯಲು ಕೆಲವೊಮ್ಮೆ ದೂರದ ಸ್ಥಳಗಳಿಗೆ ತೆರಳಬೇಕಾಗುತ್ತದೆ. ಸಾರಿಗೆ ಸೌಲಭ್ಯವಿಲ್ಲದಿದ್ದರೆ ಮತ್ತು ಕೋವಿಡ್ ನಿಯಮಾವಳಿ ಪಾಲಿಸದಿದ್ದರೆ ಅವರಿಗೆ ತೊಂದರೆಯಾಗಬಹುದು. ಹೀಗಾಗಿ ಜನರ ಅನುಕೂಲಕ್ಕಾಗಿ, ಸುಮಾರು 30 ರಷ್ಟು ಮಂದಿ ಒಂದೆಡೆ ಸೇರುವಂತಾದರೆ ಅಲ್ಲಿಗೆ ಬಂದು ಲಸಿಕೆ ನೀಡಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು