Gujarat Results: 1.92 ಲಕ್ಷ ಮತಗಳ ಅಂತರದಿಂದ ಗೆದ್ದ ಸಿಎಂ ಭೂಪೇಂದ್ರ ಪಟೇಲ್

ಘಟ್ಲೋಡಿಯಾ: ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಘಟ್ಲೋಡಿಯಾ ವಿಧಾನಸಭೆ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪಟೇಲ್ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿ ಈಗಾಗಲೇ ಘೋಷಿಸಿದೆ.
ಪಟೇಲ್ ಅವರು 2,12,480 ಮತ ಪಡೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಅಮಿ ಯಾಜ್ನಿಕ್ ಅವರು ಕೇವಲ 21,120 ಮತ ಗಳಿಸಿದ್ದು, 1.92 ಲಕ್ಷ ಮತಗಳ ಅಂತರದಿಂದ ಸೋಲೊಪ್ಪಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿರುವ ಎಎಪಿ ಅಭ್ಯರ್ಥಿ ವಿಜಯ್ ಪಟೇಲ್ ಅವರು 15,902 ಮತ ಗಳಿಸಿದ್ದಾರೆ.
Gujarat polls: CM Bhupendra Patel wins Ghatlodia seat by a margin of 1.92 lakh votes
— Press Trust of India (@PTI_News) December 8, 2022
ಪಾಟಿದಾರ್ ಸಮುದಾಯದ ಪ್ರಾಬಲ್ಯವಿರುವ ಹಾಗೂ ಗಾಂಧಿನಗರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಘಟ್ಲೋಡಿಯಾ, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಆನಂದಿಬೆನ್ ಪಟೇಲ್ ಕೂಡ ಇಲ್ಲಿಯವರೇ.
ಇದನ್ನೂ ಓದಿ: ಸಿಎಂ ಭೂಪೇಂದ್ರ ಕ್ಷೇತ್ರದಲ್ಲಿ ಪ್ರತಿಷ್ಠೆ ಪಣ
ಪಾಟಿದಾರ್ ಮೀಸಲಾತಿ ಹೋರಾಟದ ನಡುವೆಯೂ 2017ರ ಚುನಾವಣೆಯಲ್ಲಿ ಭೂಪೆಂದ್ರ ಪಟೇಲ್ ಅವರು 1.17 ಲಕ್ಷ ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
ಘಟ್ಲೋಡಿಯಾದಲ್ಲಿ ಒಟ್ಟು 3.70 ಲಕ್ಷ ಮತದಾರರಿದ್ದಾರೆ. ಈ ಮೊದಲು ಸರ್ಖೆಜ್ ವಿಧಾನಸಭೆಗೆ ಸೇರಿದ್ದ ಈ ಕ್ಷೇತ್ರವನ್ನು 2012ರಲ್ಲಿ ವಿಭಜಿಸಲಾಗಿತ್ತು. ಆಗ ಆನಂದಿಬೆನ್ ಪಟೇಲ್ ಅವರು 1.1 ಲಕ್ಷ ಮತಗಳ ಅಂತರಿದಿಂದ ಜಯಗಳಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.