ಗಾಂಧಿನಗರ: ಸಬ್ ಇನ್‌ಸ್ಪೆಕ್ಟರ್ ಮತ್ತು ಮೇಲಿನ ಅಧಿಕಾರಿಗಳಿಗೆ ಬಾಡಿ ಕ್ಯಾಮೆರಾ ನೀಡಲಾಗುವುದು ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಶುಕ್ರವಾರ ಹೇಳಿದರು. ಈ ಕ್ಯಾಮೆರಾಗಳಿಗೆ ಕಂಟ್ರೋಲ್ ರೂಂ ಸಂಪರ್ಕ ಇರಲಿದ್ದು, ಈ ಮೂಲಕ ಪೊಲೀಸರ ವರ್ತನೆ ಗಮನಿಸಲಾಗುವುದು ಎಂದು ತಿಳಿಸಿದ್ದಾರೆ.
ಅಮೆರಿಕ ಮತ್ತು ಇತರೆ ಅಭಿವೃದ್ಧಿ ದೇಶಗಳಲ್ಲಿ ಹೀಗೆ ಬಾಡಿ ಕ್ಯಾಮೆರಾ ಅನ್ನು ಅಧಿಕಾರಿಗಳಿಗೆ ನೀಡಲಾಗುತ್ತದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರೂಪಾಣಿ ಅವರು, ಕ್ಯಾಮೆರಾ ಅನ್ನು ಪೊಲೀಸರ ಸಮವಸ್ತ್ರಕ್ಕೆ ಜೋಡಿಸಲಾಗುವುದು. ಕರ್ತವ್ಯದ ಅವಧಿಯಲ್ಲಿ ಚಲನವಲನದ ನೇರ ಪ್ರಸಾರ ಕಂಟ್ರೋಲ್ ರೂಂನಲ್ಲಿ ಸಿಗಲಿದೆ ಎಂದಿದ್ದಾರೆ.
ಮೊದಲ ಹಂತದಲ್ಲಿ ಸಂಚಾರ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಮತ್ತು ಇನ್‌ಸ್ಪೆಕ್ಟರ್‌ಗಳಿಗೆ ಈ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.