ನವದೆಹಲಿ: ‘ಕಾಂಗ್ರೆಸ್ ಅನ್ನು ದೂರುವ ಬದಲು ನಿಮ್ಮ ದುರಾಡಳಿತ ಬಗ್ಗೆ ಮಾತನಾಡಿ‘ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಖರ್ಗೆ ತಿರುಗೇಟು ನೀಡಿದ್ದಾರೆ.

‘ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲಿಲ್ಲ. ವಿಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ, ಸ್ವಜನ ಪಕ್ಷಪಾತ ಹಾಗೂ ಮತೀಯವಾದಗಳಿಗೆ ಬೆಂಬಲ ನೀಡುತ್ತಿವೆ. ಸಮಾಜಘಾತುಕ ಶಕ್ತಿಗಳನ್ನು ಬೆಂಬಲಿಸುತ್ತಿವೆ‘ ಎಂದು ಮೋದಿ ಆರೋಪಿಸಿದ್ದರು.

ಇದಕ್ಕೆ ಟ್ವೀಟ್ ಮೂಲಕ ಪ್ರತ್ಯುತ್ತರ ನೀಡಿರುವ ಖರ್ಗೆ, ‘ನರೇಂದ್ರ ಮೋದಿ ಅವರೇ, ಕಾಂಗ್ರೆಸ್ ಅನ್ನು ಟೀಕೆ ಮಾಡುವ ಬದಲು, ಬಿಜೆಪಿಯ ದುರಾಡಳಿತದ ಬಗ್ಗೆ ಮಾತನಾಡಿ. ಯಾಕೆ ಗುಜರಾತ್‌ನ ಮಕ್ಕಳ ಭವಿಷ್ಯ ಹಾಳಾಗಿದೆ? 30 ರಾಜ್ಯಗಳ ಪೈಕಿ ಯಾಕೆ ಗುಜರಾತ್ ಅಪೌಷ್ಠಿಕತೆ ಹಾಗೂ ದೇಹ ತೂಕ ಕಡಿಮೆ ಹೊಂದಿರುವ ಮಕ್ಕಳ ಪೈಕಿ 29ನೇ ಸ್ಥಾನದಲ್ಲಿದೆ? ಶಿಶುಮರಣದಲ್ಲಿ 19ನೇ ಸ್ಥಾನದಲ್ಲಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ 27 ವರ್ಷಗಳಲ್ಲಿ ನೀವು ನಿಭಾಯಿಸಿದ ಹೊಣೆಗಾರಿಕೆ ಬಗ್ಗೆ ಗುಜರಾತ್ ಉತ್ತರ ಬಯಸುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.