ಸೂರತ್: ಅಪಘಾತಕ್ಕೀಡಾಗಿ ಕಾರಿನಡಿ ಸಿಲುಕಿದ್ದ ಬೈಕ್ ಸವಾರನನ್ನು 12 ಕಿ.ಮಿ ದೂರ ಎಳೆದೊಯ್ದು ಕೊಲೆ ಮಾಡಿದ ಚಾಲಕನನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಸೂರತ್‌ನ ಹೊರವಲಯ ಪಾಲ್ಸಾನ ಎಂಬಲ್ಲಿ ಡಿಸೆಂಬರ್ 18ರಂದು ಈ ಘಟನೆ ನಡೆದಿದ್ದು, ಗುರುವಾರ (ಜ.26) ರಂದು ಆರೋಪಿಯ ಬಂಧನವಾಗಿದೆ.

ಕಟ್ಟಡ ನಿರ್ಮಾಣ ವಲಯದ ಉದ್ಯಮಿಯಾಗಿರುವ ಬಿರೇನ್ ಲಾಡುಮೋರ್ ಎಂಬವರು ಈ ಕೃತ್ಯ ಎಸಗಿದ್ದಾನೆ. ಘಟನೆ ಬಳಿಕ ಮುಂಬೈ ಹಾಗೂ ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಂಪತಿಗಳು ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಗುದ್ದಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಾಗರ್ ಪಾಟೀಲ್ ಅವರನ್ನು 12 ಕಿ.ಮಿ ದೂರಕ್ಕೆ ಎಳೆದುಕೊಂಡು ಹೋಗಲಾಗಿದೆ. ಪತ್ನಿಯ ಮೃತದೇಹ ಸಿಕ್ಕ 12 ಕಿ.ಮಿ ದೂರದಲ್ಲಿ ಪತಿಯ ಮೃತದೇಹ ಲಭಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಕಾರಿನಡಿಗೆ ಬೈಕ್ ಸವಾರ ಸಿಲುಕಿದ್ದ ಎಂದು ನನಗೆ ತಿಳಿದಿರಲಿಲ್ಲ. ಅಪಘಾತ ಆದ ಬಳಿಕ ಭಯದಿಂದ ನಾನು ತಪ್ಪಿಸಿಕೊಳ್ಳಲು ಯತ್ನಿಸಿದ್ದೆ‘ ಎಂದು ಆರೋಪಿ ಹೇಳಿದ್ದಾಗಿ ಸೂರತ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಇಲೇಶ್ ಪಾಟೀಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.