ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲೀಮರ ಟೋಪಿ ಧರಿಸಿರುವ ವಾಜಪೇಯಿ, ರಾಜನಾಥ್‌ ಫೋಟೊ ಹಂಚಿಕೊಂಡ ಹರೀಶ್‌ ರಾವತ್‌ 

Last Updated 31 ಜುಲೈ 2021, 17:15 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಉತ್ತರಾಖಂಡ): ಮುಸ್ಲಿಂ ಟೋಪಿ ಧರಿಸಿರುವ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ರಾಜನಾಥ್‌ ಸಿಂಗ್‌, ನಿತಿನ್‌ ಗಡ್ಕರಿ ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌, ಅವರ ಹೆಸರಿನ ಮುಂದೆ ‘ಮೌಲಾನಾ’ ಎಂದು ಸೇರಿಸುವಂತೆ ಬಿಜೆಪಿಗೆ ಸವಾಲು ಹಾಕಿದ್ದಾರೆ.

‘ನಾನು ಟೋಪಿ ಧರಿಸಿ ದರ್ಗಾಕ್ಕೆ ಹೋದ ಚಿತ್ರವನ್ನು ಹಿಡಿದುಕೊಂಡು ಬಿಜೆಪಿ ನಾಯಕರು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ‘ಮೌಲಾನಾ ಹರೀಶ್‌ ರಾವತ್‌ ಎಂದು ಕರೆದು, ಫೋಟೊವನ್ನು ಮನೆ ಮನೆಗೆ ಕೊಂಡೊಯ್ದು ಪ್ರಚಾರ ನಡೆಸಿದ್ದರು,‘ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾಜಪೇಯಿ, ಅಡ್ವಾಣಿ, ರಾಜನಾಥ್‌ ಸಿಂಗ್‌ ಅವರಿಗೆ ಮೌಲಾನ ಎಂದು ಹೆಸರಿಡಲು ಬಿಜೆಪಿಯ ನನ್ನ ಸ್ನೇಹಿತರಿಗೆ ಧೈರ್ಯವಿದೆಯೇ,’ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯ ‘ಹಿಂದುತ್ವ ಐಕಾನ್’ ಎಂದು ಕರೆಯಲಾಗುವ ನರೇಂದ್ರ ಮೋದಿಯವರೂ ಟೋಪಿ ಧರಿಸಿದ ಚಿತ್ರ ಪೋಸ್ಟ್‌ನಲ್ಲಿದೆ. ಮೋದಿ ಹೆಸರಿನ ಮುಂದೆ ಮೌಲಾನಾ ಎಂದು ಸೇರಿಸುವ ತಾಕತ್ತು ಬಿಜೆಪಿ ನಾಯಕರಿಗೆ ಇದೆಯೇ ಎಂದೂ ಅವರು ಸವಾಲು ಎಸೆದಿದ್ದಾರೆ.

ಆದರೆ, ಫೇಸ್‌ಬುಕ್‌ಗೆ ಅಪ್ಲೋಡ್‌ ಮಾಡಲಾದ ಫೋಟೋಗಳಲ್ಲಿ ಮೋದಿ ಅವರ ಫೋಟೊ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT