ಸೋಮವಾರ, ಜೂನ್ 27, 2022
24 °C

ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ: ಹರಿಯಾಣ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡಿಗಡ: ಪಾಣಿಪತ್‌ನಿಂದ ಹರಿಯಾಣದ ಸಿರ್ಸಾಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಸಾಗಿಸುತ್ತಿದ್ದ ಟ್ಯಾಂಕರ್‌ ವಾಹನವೊಂದು ಶುಕ್ರವಾರ ನಾಪತ್ತೆಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಔಷಧ ನಿಯಂತ್ರಕರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪಾಣಿಪತ್ ಪೊಲೀಸರು ತಿಳಿಸಿದ್ದಾರೆ. 

ದೆಹಲಿ ಸರ್ಕಾರದಿಂದ ಲೂಟಿ–ಆರೋಪ: ಪಾಣಿಪತ್‌ನಿಂದ ಫರಿದಾಬಾದ್‌ ಕೋವಿಡ್‌ ಆಸ್ಪತ್ರೆಗಳಿಗೆ ಆಮ್ಲಜನಕ ಸಾಗಿಸುತ್ತಿದ್ದ ವಾಹನವನ್ನು ದೆಹಲಿ ಸರ್ಕಾರ ದರೋಡೆ ಮಾಡಿದೆ ಎಂದು ಹರಿಯಾಣದ ಗೃಹ ಮತ್ತು ಆರೋಗ್ಯ ಖಾತೆ ಸಚಿವ ಅನಿಲ್ ವಿಜ್‌ ಆರೋಪಿಸಿದ್ದಾರೆ.

ಪಾಣಿಪತ್‌ನಿಂದ ಹೊರಟ ಆಮ್ಲಜನಕ ತುಂಬಿದ ಟ್ಯಾಂಕರ್‌ ಕೇಂದ್ರಾಡಳಿತದ ಸರಹದ್ದಿನಲ್ಲಿ ಹಾದು ಹೋಗುವಾಗ ದೆಹಲಿ ಸರ್ಕಾರ ಲೂಟಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು