ಸೋಮವಾರ, ಜೂನ್ 21, 2021
29 °C

ನಿದ್ದೆಯಿಂದ ಎಚ್ಚೆತ್ತು ಕೋವಿಡ್ ಸವಾಲು ಎದುರಿಸಲು ಸ್ಪಂದಿಸಿ: ಕೇಂದ್ರಕ್ಕೆ ಐಎಂಎ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಶಮನಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಎಚ್ಚೆತ್ತುಕೊಂಡು ತಕ್ಷಣ ಸ್ಪಂದಿಸಬೇಕಿದೆ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಎಚ್ಚರಿಸಿದೆ.

ದೇಶದಲ್ಲಿ ತೀವ್ರವಾಗಿ ವ್ಯಾಪಿಸಿರುವ ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಇಲಾಖೆಯು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ವೈದ್ಯರ ಸಂಘವು ಆರೋಪಿಸಿದೆ.

ಆರೋಗ್ಯ ಸಚಿವಾಲಯವು ನಿದ್ರೆಯಿಂದ ಎಚ್ಚೆತ್ತುಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವ ಸವಾಲುಗಳನ್ನು ಕಡಿಮೆ ಮಾಡಲು ತ್ವರಿತವಾಗಿ ಸ್ಪಂದಿಸುವಂತೆ ಒತ್ತಾಯಿಸುತ್ತದೆ. ವಿನಾಶಕಾರಿ ಎರಡನೇ ತರಂಗದಿಂದ ಉಂಟಾಗಿರುವ ಬಿಕ್ಕಟ್ಟನ್ನು ಎದುರಿಸುವಲ್ಲಿ ಆರೋಗ್ಯ ಸಚಿವಾಲಯ ತೋರಿದ ನಿರುತ್ಸಾಹ ಹಾಗೂ ಸೂಕ್ತವಲ್ಲದ ಕ್ರಮಗಳನ್ನು ನೋಡಿ ಐಎಂಎ ಆಶ್ಚರ್ಯಚಕಿತಗೊಂಡಿದೆ ಎಂದು ಪ್ರಕಟಣೆ ಹೇಳಿದೆ.

ಇದನ್ನೂ ಓದಿ: 

ಕಳೆದ 20 ದಿನಗಳಿಂದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಹಾಗೂ ಸಂಪೂರ್ಣ ಪೂರ್ವಯೋಜಿತ ರಾಷ್ಟ್ರೀಯ ಲಾಕ್‌ಡೌನ್ ಹೇರಲು ಒತ್ತಾಯಿಸುತ್ತಿದೆ. ಆದರೆ ಐಎಂಎ ಮಾಡಿರುವ ಸಲಹೆಗಳನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ವಾಸ್ತವತೆಗಳನ್ನು ಅರಿಯದೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಟೀಕಿಸಿದೆ.

ಲಾಕ್‌ಡೌನ್ ಹೇರಲು ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರತಿದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ಗಂಭೀರ ಪ್ರಕರಣಗಳು ಶೇಕಡಾ 40ರಷ್ಟು ಹೆಚ್ಚಾಗಿದೆ. ರಾತ್ರಿ ಕರ್ಫ್ಯೂ ಯಾವುದೇ ಪರಿಣಾಮವನ್ನು ಬೀರಿಲ್ಲ. ಆರ್ಥಿಕತೆಗಿಂತಲೂ ಜನರ ಜೀವ ಮುಖ್ಯ ಎಂದು ಹೇಳಿದೆ.

ಕೋವಿಡ್ ಲಸಿಕೆ ಬೇಕಾದಷ್ಟು ಸಂಗ್ರಹಿಸಿಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹಾಗಾಗಿ ಅನೇಕ ಸ್ಥಳಗಳಲ್ಲಿ ಲಸಿಕೆ ಅಭಾವ ಕಾಡುತ್ತಿದೆ ಎಂದು ಆರೋಪಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು