ಮಂಗಳವಾರ, ಜನವರಿ 26, 2021
28 °C

ಮನಾಲಿಯಲ್ಲಿ ಭಾರಿ ಹಿಮಪಾತಕ್ಕೆ ಸಿಲುಕಿದ 500ಕ್ಕೂ ಹೆಚ್ಚು ಪ್ರವಾಸಿಗರು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕುಲ್ಲು (ಹಿಮಾಚಲ ಪ್ರದೇಶ): ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮನಾಲಿಯಲ್ಲಿ ಭಾರಿ ಹಿಮಪಾತದ ಹಿನ್ನೆಲೆಯಲ್ಲಿ 500ಕ್ಕೂ ಹೆಚ್ಚು ಪ್ರವಾಸಿಗರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಟಲ್ ಸುರಂಗ ಮತ್ತು ಸೋಲಾಂಗ್ ನಲ್ಲಾ ನಡುವಿನ ರಸ್ತೆಯಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ತೊಂದರೆ ಎದುರಾಗಿದೆ. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, ಆದಷ್ಟು ಬೇಗ ವಾಹನ ಸಂಚಾರ ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಮನಾಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ರಾಮನ್ ಘರ್‌ಸಂಗಿ ತಿಳಿಸಿದ್ದಾರೆ.

ರಾತ್ರಿ ಸುಮಾರು 8ರ ಹೊತ್ತಿಗೆ 20ಕ್ಕೂ ಹೆಚ್ಚು 4X4 ವಾಹನಗಳೊಂದಿಗೆ ರಕ್ಷಣಾ ತಂಡವು ಸ್ಥಳವನ್ನು ತಲುಪಿದೆ. ಸಿಕ್ಕಿಬಿದ್ದವರ ಸ್ಥಳಾಂತರಕ್ಕಾಗಿ 48 ಆಸನ ಗಳ ಬಸ್ ಕೂಡಾ ಕುಲಾಂಗ್‌ಗೆ ರವಾನಿಸಲಾಗಿದೆ.

ಇದನ್ನೂ ಓದಿ: 

ಏತನ್ಮಧ್ಯೆ ಹಿಮಾಚಲ ಪ್ರದೇಶದಲ್ಲಿ 'ಯಲ್ಲೋ ಅಲರ್ಟ್' ನೀಡಿರುವ ಹವಾಮಾನ ಇಲಾಖೆ, ಭಾರಿ ಹಿಮಪಾತಕ್ಕೆ ಸಾಧ್ಯತೆಯಿದೆ ಎಂದು ವರದಿ ಮಾಡಿದೆ. ಹಾಗೆಯೇ ಜನವರಿಂದ 3ರಿಂದ 5ರ ವರೆಗೆ ಗುಡುಗು ಸಹಿತ ಮಳೆಗೆ ಸಾಧ್ಯತೆಯಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು