ಭಾನುವಾರ, ಜುಲೈ 3, 2022
24 °C

ಈಗಲೂ ನಾನು ರೈತ ಹೋರಾಟದ ಪರವಾಗಿದ್ದೇನೆ: ಗ್ರೇಟಾ ಮತ್ತೊಮ್ಮೆ ಟ್ವೀಟ್‌

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ದೆಹಲಿ: ಈಗಲೂ ನಾನು ರೈತರ ಪರವಾಗಿದ್ದೇನೆ. ಅವರ ಶಾಂತಿಯುತ ಹೋರಾಟವನ್ನು ಬೆಂಬಲಿಸುತ್ತೇನೆ ಎಂದು ಪರಿಸರ ಹೋರಾಟಗಾರ್ತಿ, ಸ್ವೀಡಿಶ್‌ನ ಗ್ರೇಟಾ ಥನ್ಬರ್ಗ್‌ ಗುರುವಾರ ಮತ್ತೊಮ್ಮೆ ಟ್ವೀಟ್‌ ಮಾಡಿದ್ದಾರೆ.

ರೈತರ ಹೋರಾಟವನ್ನು ಬೆಂಬಲಿಸಿ ಗುರುವಾರವಷ್ಟೇ ಟ್ವೀಟ್‌ ಮಾಡಿದ್ದ ಗ್ರೇಟಾ, ಭಾರತದ ರೈತ ಹೋರಾಟಕ್ಕೆ ನಾವು ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದು ಹೇಳಿದ್ದರು. ಸಿಎನ್‌ಎನ್‌ ಸುದ್ದಿ ಹಂಚಿಕೊಂಡು ಅದರೊಂದಿಗೆ ಅವರು ತಮ್ಮ ಅಭಿಪ್ರಾಯವನ್ನು ಸೇರಿಸಿದ್ದರು. ನಂತರ ಮತ್ತೊಂದು ಟ್ವೀಟ್‌ ಮಾಡಿದ್ದ ಅವರು, 'ಗ್ಲೋಬಲ್‌ ಫಾರ್ಮರ್ ಸ್ಟ್ರೈಕ್‌ ಫರ್ಸ್ಟ್‌ ವೇವ್‌' ಎಂಬ ದಾಖಲೆ ಲಗತ್ತಿಸಿದ್ದರು. ಅದರಲ್ಲಿನ ಕೆಲ ವಿಚಾರಗಳು ವಿವಾದಕ್ಕೆ ಕಾರಣವಾಗಿದ್ದವು. ಜೊತೆಗೆ ಗ್ರೇಟಾ ಅಭಿಪ್ರಾಯದ ವಿರುದ್ಧ ಭಾರತದ ಹಲವು ಗಣ್ಯರು ಕಿಡಿ ಕಾರಿದ್ದರು. ಇದು ಭಾರತದ ಆಂತರಿಕ ವಿಚಾರ ಎಂದು ಹೇಳಿಕೊಂಡಿದ್ದರು.

ಇದೆಲ್ಲ ಬೆಳವಣಿಗೆಗಳ ನಂತರವೂ ತಾವು ರೈತ ಹೋರಾಟದ ಪರವಾಗಿರುವುದಾಗಿ ಗ್ರೇಟಾ ಥನ್ಬರ್ಗ್‌ ಸ್ಪಷ್ಟಪಡಿಸಿದ್ದಾರೆ. ಶಾಂತಿಯುತ ಹೋರಾಟಕ್ಕೆ ಬೆಂಬಲವಾಗಿರುವುದಾಗಿ ಹೇಳಿರುವ ಅವರು, 'ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಗಳು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ,' ಎಂದು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು