ಸೋಮವಾರ, ಜುಲೈ 4, 2022
24 °C

ಕಾಂಗ್ರೆಸ್‌ ಬಯಸಿದರೆ ನಾವೆಲ್ಲರೂ ಒಟ್ಟಾಗಿ ಹೋರಾಡಬಹುದು: ಮಮತಾ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕಾಂಗ್ರೆಸ್‌ ಬಯಸಿದರೆ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬಹುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ.

ಕಾಂಗ್ರೆಸ್ ಬಯಸಿದರೆ ನಾವೆಲ್ಲರೂ ಒಟ್ಟಾಗಿ (2024 ಸಾರ್ವತ್ರಿಕ ಚುನಾವಣೆಯಲ್ಲಿ) ಹೋರಾಡಬಹುದು. ಸದ್ಯಕ್ಕೆ ಆಕ್ರಮಣಕಾರಿಗಳಂತಾಗುವ ಅಗತ್ಯವಿಲ್ಲ. ಆಶಾವಾದಿಗಳಾಗಿರೋಣ. ಈ ಗೆಲುವು (4 ರಾಜ್ಯಗಳ ವಿಧಾನಸಭೆ ಚುನಾವಣೆ) ಬಿಜೆಪಿಗೆ ದೊಡ್ಡ ನಷ್ಟವಾಗಿ ಪರಿಣಮಿಸಲಿದೆ. 2022ರ ಚುನಾವಣೆ 2024ರ ಚುನಾವಣೆಯ ಭವಿಷ್ಯ ನಿರ್ಧರಿಸಲಿದೆ ಎಂಬುದು ವಾಸ್ತವವಲ್ಲ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ. 

ಆದರೆ, ಕಾಂಗ್ರೆಸ್‌ ಜೊತೆಗೆ ಒಟ್ಟಾಗಿ ಹೋರಾಟ ನಡೆಸಬೇಕು ಎಂಬ ಮಾತನ್ನು ಅವರು ಹೆಚ್ಚು ವಿವರಿಸಿಲ್ಲ.

ಉತ್ತರ ಪ್ರದೇಶದಲ್ಲಿ ಮತಯಂತ್ರಗಳ ಅಕ್ರಮ ನಡೆದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹತಾಶರಾಗಬಾರದು. ಇವಿಎಂಗಳ ಫೋರೆನ್ಸಿಕ್ ಪರೀಕ್ಷೆಗೆ ಅವರು ಆಗ್ರಹಿಸಬಹುದು. ಈ ಬಾರಿ ಅಖಿಲೇಶ್ ಯಾದವ್ ಅವರ ಮತ ಶೇ 20 ರಿಂದ 37ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು