ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನ್‌ ಕಿ ಬಾತ್‌’ನಲ್ಲಿ ಚನ್ನಪಟ್ಟಣದ ಗೊಂಬೆ ಉದ್ಯಮವನ್ನು ಉಲ್ಲೇಖಿಸಿದ ಪ್ರಧಾನಿ

Last Updated 30 ಆಗಸ್ಟ್ 2020, 10:12 IST
ಅಕ್ಷರ ಗಾತ್ರ

ನವದೆಹಲಿ:ಆಟಿಕೆ ಉದ್ಯಮದಲ್ಲಿ ಭಾರತವು ಮುಂಚೂಣಿಗೆ ಬರಬೇಕಾದ ಅಗತ್ಯವಿದೆ ಎಂಬ ವಿಚಾರವನ್ನು ಪ್ರತಿಪಾದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು, ಇದಕ್ಕೆ ರಾಜ್ಯದಚನ್ನಪಟ್ಟಣ ತಾಲೂಕಿನ ಗೊಂಬೆ ಉದ್ಯಮದ ಉದಾಹರಣೆ ನೀಡಿದ್ದಾರೆ.

‘ವಿಶ್ವಕ್ಕೇ ಆಟಿಕೆಗಳನ್ನು ಪೂರೈಸುವಂತಹ ಶಕ್ತಿ, ಸಾಮರ್ಥ್ಯ ಭಾರತಕ್ಕಿದ್ದು, ಮುಂದೊಂದು ದಿನ ಜಾಗತಿಕವಾಗಿ ಆಟಿಕೆ ಪೂರೈಸುವ ತಾಣ ಆಗುವ ಅವಕಾಶವೂ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

‘ಮನ್‌ ಕಿ ಬಾತ್‌‘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶೀಯವಾಗಿ ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಇದು ಸಕಾಲವಾಗಿದ್ದು, ಸ್ಥಳೀಯವಾಗಿ ಆಟಿಕೆಗಳ ತಯಾರಿಸಲು ಹೊಸದಾಗಿ ನವೋದ್ಯಮಗಳನ್ನು ಆರಂಭಿಸಬೇಕೆಂದು’ ಕರೆ ನೀಡಿದರು.

‘ಜಾಗತಿಕ ಮಟ್ಟದಲ್ಲಿ ಆಟಿಕೆಗಳ ಕ್ಷೇತ್ರದಲ್ಲಿ ಸುಮಾರು ₹7 ಲಕ್ಷ ಕೋಟಿಯಷ್ಟು ವ್ಯವಹಾರ ನಡೆಯುತ್ತಿದ್ದು, ಇದರಲ್ಲಿ ಭಾರತದ ಪಾಲು ತುಂಬಾ ಕಡಿಮೆ ಇದೆ. ಈ ಪಾಲನ್ನು ಹೆಚ್ಚಿಸಲು ಸಂಕಲ್ಪ ಮಾಡಬೇಕು. ಈ ಸಂಬಂಧ ಸರ್ಕಾರ ಆಟಿಕೆ ಉದ್ಯಮಕ್ಕೆ ಹೊಸ ರೂಪ ನೀಡಲು ಹೊಸ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ’ ಎಂದು ತಿಳಿಸಿದರು.

ಉತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿರುವ ಹಲವಾರು ಪ್ರತಿಭಾವಂತ ಮತ್ತು ಕುಷಲಕರ್ಮಿ ಕಲಾವಿದರು ನಮ್ಮ ದೇಶದಲ್ಲಿದ್ದಾರೆ. ಆಟಿಕೆ ತಯಾರಕ ತಾಣಗಳಾಗಿ ದೇಶದ ಹಲವು ಸ್ಥಳಗಳು ನಮ್ಮಲ್ಲಿ ಬೆಳದಿವೆ. ಉದಾಹರಣೆಗೆ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣ; ಆಂಧ್ರಪ್ರದೇಶದಲ್ಲಿರುವ ಕೊಂಡಪಲ್ಲಿ; ತಮಿಳುನಾಡಿನ ತಂಜೂರು, ಅಸ್ಸಾಂನ ಧುಬ್ರಿ ಮತ್ತು ಉತ್ತರಪ್ರದೇಶದ ವಾರಣಾಸಿಗಳು ಆಟಿಕೆ ಉತ್ಪಾದನ ನಗರಗಳಾಗಿ ಬೆಳೆದಿವೆ ಎಂದು ಮೋದಿ ಹೇಳಿದರು.

ಇದೇ ವೇಳೆಕಂಪ್ಯೂಟರ್‌ನಲ್ಲಿ ಆಡುವ ಆಟಗಳನ್ನೂ ಅಭಿವೃದ್ಧಿಪಡಿಸುವಂತೆಯುವ ಉದ್ಯಮಿಗಳಿಗೆ ಅವರು ಸಲಹೆ ನೀಡಿದರು.

‘ದೇಶದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದೆ ಎಂದು ಹೇಳಿರುವ ಪ್ರಧಾನಿ ಮೋದಿ, ಭಾರತ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಮೂಲಕ ಮಾರಕ ವೈರಾಣುವನ್ನು ಮಣಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಾಗರಿಕರು ಸಂಯಮದಿಂದ ವರ್ತಿಸಿದ್ದಾರೆಂದು ಶ್ಲಾಘಿಸಿದ ಪ್ರಧಾನಿಯವರು, ಸಾಂಕ್ರಾಮಿಕ ರೋಗದ ನಡುವೆ ಆಚರಿಸಿದ ಹಬ್ಬ–ಹರಿದಿಗಳಲ್ಲಿ ಸಾರ್ವಜನಿಕರು ಸರಳತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗಿರುವುದನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿಯವರು, ಬಿತ್ತನೆ ಪ್ರಮಾಣ ಹೆಚ್ಚಿಸಿದ ರೈತರ ಪರಿಶ್ರಮವನ್ನು ಶ್ಲಾಘಿಸಿದರು.

‘ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಭವಿಷ್ಯದ ಪೀಳಿಗೆಗೆ ಉತ್ತಮ ಹವಾಮಾನ ಒದಗಿಸುವುದು ನಮ್ಮ ಜವಾಬ್ದಾರಿಯೂ ಹೌದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT