ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪೂರೈಕೆಯಲ್ಲಿ ಭಾರತಕ್ಕೆ ಆದ್ಯತೆ; ಸರ್ಕಾರಕ್ಕೆ ಪ್ರತಿ ಡೋಸ್‌ಗೆ ₹250: ಸೆರಂ

ಖಾಸಗಿ ಮಾರುಕಟ್ಟೆಗೆ ಪ್ರತಿ ಡೋಸ್‌ ಲಸಿಕೆಗೆ ₹1000
Last Updated 24 ನವೆಂಬರ್ 2020, 3:10 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಆಕ್ಸ್‌ಫರ್ಡ್‌ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌–19 'ಕೋವಿಶೀಲ್ಡ್‌' ಲಸಿಕೆಯು ಭರವಸೆದಾಯಕ ಫಲಿತಾಂಶ ನೀಡಿರುವುದಾಗಿ ಪ್ರಕಟಿಸಲಾಗಿದೆ. ಲಸಿಕೆ ಪೂರೈಕೆಯಲ್ಲಿ ಭಾರತವೇ ಮೊದಲ ಆದ್ಯತೆಯಾಗಿರಲಿದೆ ಎಂದು ಸೆರಂ ಸಂಸ್ಥೆ ಮುಖ್ಯಸ್ಥ ಹೇಳಿದ್ದಾರೆ.

ಈಗಾಗಲೇ ಲಸಿಕೆಯ 4 ಕೋಟಿ ಡೋಸ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಭಾರತದ ಸೆರಂ ಸಂಸ್ಥೆಯ ಸಿಇಒ ಅದಾರ್‌ ಪೂನಾವಾಲಾ ಸೋಮವಾರ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

'ಜನವರಿ ವೇಳೆಗೆ ನಾವು 10 ಕೋಟಿ ಡೋಸ್‌ಗಳಷ್ಟು ಲಸಿಕೆ ತಯಾರಿಸಿರುತ್ತೇವೆ.' ಸೆರಂ ಸಂಸ್ಥೆಯಲ್ಲಿ ತಯಾರಿಸಲಾಗುವ ಶೇ 90ರಷ್ಟು ಪ್ರಮಾಣದ ಲಸಿಕೆಯನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಪ್ರತಿ ಡೋಸ್‌ ಲಸಿಕೆಯನ್ನು ಸರ್ಕಾರಕ್ಕೆ 250 ರೂಪಾಯಿಗೆ (3 ಡಾಲರ್) ಮಾರಾಟ ಮಾಡುವುದಾಗಿ ಪೂನಾವಾಲಾ ಹೇಳಿದ್ದಾರೆ.

'ಸಂಸ್ಥೆಯಲ್ಲಿ ತಯಾರಿಸಲಾಗುವ ಲಸಿಕೆಯ ಒಟ್ಟು ಪ್ರಮಾಣದಲ್ಲಿ ಶೇ 90ರಷ್ಟು ಡೋಸ್‌ಗಳು ಭಾರತ ಸರ್ಕಾರಕ್ಕೆ ಹೋಗಲಿವೆ ಹಾಗೂ ಬಹುಶಃ ಶೇ 10ರಷ್ಟು ಡೋಸ್‌ಗಳು ಖಾಸಗಿ ಮಾರುಕಟ್ಟೆಗೆ ಮಾರಾಟವಾಗಲಿದೆ. ಖಾಸಗಿಯಾಗಿ ಪ್ರತಿ ಡೋಸ್‌ಗೆ ₹1,000ಕ್ಕೆ ಮಾರಾಟ ಮಾಡವಾಗಲಿದೆ. ತುರ್ತು ಸಂದರ್ಭಗಳಲ್ಲಿ ಲಸಿಕೆ ಬಳಕೆಗೆ ಡಿಸೆಂಬರ್‌ನಲ್ಲಿ ಔಷಧ ಗುಣಮುಟ್ಟ ನಿಯಂತ್ರಣ ಸಂಸ್ಥೆಯಿಂದ ಅನುಮತಿ ದೊರೆತರೆ, ಜನವರಿಯಲ್ಲಿ ಲಸಿಕೆಯ ಡೋಸ್‌ಗಳನ್ನು ಬಿಡುಗಡೆ ಮಾಡಬಹುದಾಗಿದೆ' ಎಂದಿದ್ದಾರೆ.

ಈಗಾಗಲೇ 23,000 ಜನರ ಮೇಲೆ ಆಸ್ಟ್ರಾಜೆನೆಕಾ 'ಕೋವಿಶೀಲ್ಡ್‌' ಲಸಿಕೆಯ ಪ್ರಯೋಗ ನಡೆಸಲಾಗಿದ್ದು, ಕೊರೊನಾ ವೈರಸ್‌ ಸೋಂಕು ತಡೆಯುವುದರಲ್ಲಿ ಶೇ 70ರಷ್ಟು ಪರಿಣಾಮಕಾರಿಯಾಗಿರುವುದು ತಿಳಿದುಬಂದಿದೆ.

ಸಾಮಾನ್ಯ ರೆಫ್ರಿಜರೇಟರ್‌ನಲ್ಲಿ ಇರುವಷ್ಟು ಶೀತಲ ವಾತಾವರಣದೊಂದಿಗೆ ಈ ಲಸಿಕೆಯ ಪೂರೈಕೆ ಮಾಡುವುದು ಸಾಧ್ಯವಿದೆ. ಇತರೆ ಲಸಿಕೆಗಳನ್ನು ಸಂಗ್ರಹಿಸಲು ಹೆಚ್ಚು ಶೀತಲ ವಾತಾವರಣದ ಅಗತ್ಯವಿರುತ್ತದೆ. ನಿಯಂತ್ರಣ ಸಂಸ್ಥೆಗಳ ಅನುಮತಿ ದೊರೆಯುತ್ತಿದ್ದಂತೆ ಆಸ್ಟ್ರಾಜೆನೆಕಾ 2021ಕ್ಕೆ 300 ಕೋಟಿ ಡೋಸ್‌ ಲಸಿಕೆ ತಯಾರಿಸುವ ಗುರಿ ಹೊಂದಿದೆ.

ಆಸ್ಟ್ರಾಜೆನೆಕಾ ಮತ್ತು ಅಮೆರಿಕದ ಬಯೋಟೆಕ್‌ ಕಂಪನಿ 'ನೊವ್ಯಾಕ್ಸ್‌'ನ ಕೋವಿಡ್‌–19 ಲಸಿಕೆಯ 10 ಕೋಟಿ ಡೋಸ್‌ಗಳನ್ನು ತಯಾರಿಸಲು ಸೆರಂ ಸಂಸ್ಥೆಯು ಅಂತರರಾಷ್ಟ್ರೀಯ ಲಸಿಕೆ ಪೂರೈಕೆ ಸಂಸ್ಥೆ ಗಾವಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಭಾರತ ಕೋವಿಡ್‌–19 ಪ್ರಕರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ಸೆಪ್ಟೆಂಬರ್‌ ವೇಳೆಗೆ 25–30 ಕೋಟಿ ಭಾರತೀಯರಿಗೆ ಲಸಿಕೆ ಹಾಕುವ ನಿರೀಕ್ಷೆ ಇರುವುದಾಗಿ ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್‌ ಸೋಮವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT