ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ವೈದ್ಯ ವ್ಯಾಸಂಗ ಎಚ್ಚರ ಇರಲಿ ಎಂದ ಭಾರತ

Last Updated 10 ಸೆಪ್ಟೆಂಬರ್ 2022, 19:47 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿರುವ ಭಾರತ ಸರ್ಕಾರ, ಅಲ್ಲಿ ನಡೆಯುವ ಮೋಸ, ಉತ್ತೀರ್ಣ ಪ್ರಮಾಣ ಕಡಿಮೆ ಇರುವುದೂ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದೆ.

ಅಲ್ಲದೆ ಚೀನಾದಲ್ಲಿ ಅಧಿಕೃತ ಮಾತನಾಡುವ ಭಾಷೆಯಾದ ಪುಟೊನ್‌ಗುವಾವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಕಲಿಯಬೇಕಾಗುತ್ತದೆ. ಜತೆಗೆ ಅಲ್ಲಿ ಪದವಿ ಪಡೆದ ಬಳಿಕ ಭಾರತದಲ್ಲಿ ವೃತ್ತಿ ಆರಂಭಿಸಲು ಇರುವ ಕಠಿಣ ನಿಯಮಗಳ ಬಗ್ಗೆಯೂ ತಿಳಿದುಕೊಂಡಿರುವಂತೆ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಲವುಸಲಹೆಗಳಿರುವ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚೀನಾದಲ್ಲಿ ಪ್ರಸ್ತುತ ಸುಮಾರು 23,000 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ ಬಹುಪಾಲು ವೈದ್ಯಕೀಯ ವಿದ್ಯಾರ್ಥಿಗಳು. ಬೀಜಿಂಗ್‌ನ ಕೋವಿಡ್‌ ವೀಸಾ ನಿರ್ಬಂಧ ನಿಯಮಗಳಿಂದಾಗಿ ಈ ಎಲ್ಲ ವಿದ್ಯಾರ್ಥಿಗಳು ಎರಡು ವರ್ಷಗಳಿಂದ ಭಾರತದಲ್ಲಿಯೇ ಉಳಿದಿದ್ದಾರೆ.

ಚೀನಾ ಇತ್ತೀಚೆಗೆ ಆಯ್ದ ಸಂಖ್ಯೆಯ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕಾಗಿ ವೀಸಾಗಳನ್ನು ನೀಡಲು ಆರಂಭಿಸಿದೆ. ಇದರ ಬೆನ್ನಲ್ಲೇ ಚೀನಾದ ವೈದ್ಯಕೀಯ ಕಾಲೇಜುಗಳು ಭಾರತ ಮತ್ತು ವಿದೇಶದಿಂದ ಹೊಸ ವಿದ್ಯಾರ್ಥಿಗಳ ದಾಖಲಾತಿಗೆ ಚಾಲನೆನೀಡಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಸಲಹೆಗಳನ್ನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT