ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಜನತೆಯ ತುರ್ತು ಅಗತ್ಯ ಪೂರೈಸಿದ ಬಳಿಕ ಲಸಿಕೆ ರಫ್ತಿಗೆ ಚಿಂತನೆ

ಅಕ್ಷರ ಗಾತ್ರ

ನವದೆಹಲಿ: ವಿಶ್ವದ ಅತಿದೊಡ್ಡ ಕೋವಿಡ್‌-19 ಲಸಿಕೆ ಉತ್ಪಾದನಾ ರಾಷ್ಟ್ರ ಎಂದು ಗುರುತಿಸಿಕೊಂಡಿರುವ ಭಾರತ, ಡೋಸ್‌ಗಳನ್ನು ರಫ್ತು ಮಾಡುವ ನಿಟ್ಟಿನಲ್ಲಿ ಯೋಚನೆ ನಡೆಸಿದೆ. ಆದರೆ ರಾಷ್ಟ್ರದ ಪ್ರಜೆಗಳಿಗೆ ಸಾಕಾಗುವಷ್ಟು ಡೋಸ್‌ಗಳು ಉತ್ಪಾದನೆ ಆದ ಬಳಿಕ ವಿದೇಶಗಳಿಗೆ ರಫ್ತು ಮಾಡುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೋವಿಡ್‌-19 ಟಾಸ್ಕ್‌ ಫೋರ್ಸ್‌ನ ಮುಖ್ಯಸ್ಥ ಶುಕ್ರವಾರ ಹೇಳಿದ್ದಾರೆ.

ನಮ್ಮ ರಾಷ್ಟ್ರದ ಜನತೆಗೆ ಡೋಸ್‌ಗಳ ತುರ್ತು ಅಗತ್ಯ ಪೂರ್ಣಗೊಂಡ ಬಳಿಕ ಇತರರಿಗೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಲಸಿಕೆಗಳನ್ನು ರಫ್ತು ಮಾಡುವ ಮೂಲಕ ಇತರರಿಗೆ ನೆರವಾಗುವ ದೃಷ್ಟಿಯಿದೆ ಎಂದು ಡಾ. ವಿನೋದ್‌ ಕೆ ಪೌಲ್‌ ಮಾದ್ಯಮ ಒಕ್ಕೂಟಕ್ಕೆ ತಿಳಿಸಿದ್ದಾರೆ.

ಕಳೆದ ಏಪ್ರಿಲ್‌ ತಿಂಗಳಲ್ಲಿ ಲಸಿಕೆಗಳನ್ನು ಪೂರೈಸುವಿಕೆಗೆ ಕಠಿಣ ನಿರ್ಬಂಧಗಳನ್ನು ಹೇರಿದ್ದನ್ನು ಸಮರ್ಥಿಸಿಕೊಂಡ ಪೌಲ್‌, ರಾಷ್ಟ್ರದ ತುರ್ತು ಪರಿಸ್ಥಿತಿಗೆ ಸ್ಪಂದಿಸುವುದು ಸರ್ಕಾರದ ಕರ್ತವ್ಯ ಎಂದಿರುವುದಾಗಿ 'ಡಿಕ್ಕನ್‌ ಹೆರಾಲ್ಡ್‌' ವರದಿ ಮಾಡಿದೆ.

ಜನವರಿ 2021ರಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಲಸಿಕೆ ಪೂರೈಕೆ ಮಾಡಲು ಆರಂಭಿಸಿತ್ತು. ಆದರೆ ಕೋವಿಡ್‌ ಸೋಂಕು ವಿಪರೀತವಾಗಿ ವ್ಯಾಪಿಸಿದ ಹಿನ್ನೆಲೆ ತಜ್ಞರು ಲಸಿಕೆ ಪೂರೈಕೆಯನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT