ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಮೊದಲ ಖಾಸಗಿ ರಾಕೆಟ್‌ ಉಡಾವಣೆ ಶೀಘ್ರ

Last Updated 8 ನವೆಂಬರ್ 2022, 14:24 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಖಾಸಗಿಯಾಗಿ ಅಭಿವೃದ್ಧಿಪಡಿಸಲಾಗಿರುವ ಮೊದಲ ರಾಕೆಟ್‌ ‘ವಿಕ್ರಮ್‌–ಎಸ್‌’ಅನ್ನು ನವೆಂಬರ್‌ 12ರಿಂದ–16ರ ಒಳಗೆ ಉಡಾವಣೆ ಮಾಡಲಾಗುವುದು ಎಂದು ಹೈದರಾಬಾದ್‌ ಮೂಲದ ಸ್ಟಾರ್ಟ್‌ಅಪ್‌ ‘ಸ್ಕೈರೂಟ್‌ ಏರೋಸ್ಪೇಸ್‌’ ಸಂಸ್ಥೆ ಮಂಗಳವಾರ ಘೋಷಿಸಿದೆ.

ಈ ಉಡ್ಡಯನ ಯೋಜನೆಗೆ ‘ಪ್ರಾರಂಭ್‌’ ಎಂಬ ಹೆಸರು ನೀಡಲಾಗಿದೆ. ಇದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ಉಡಾವಣೆ ಮಾಡಲಾಗುವುದು. ನವೆಂಬರ್‌ 12ರಿಂದ 16ರ ವರೆಗಿನ ಅವಧಿಯಲ್ಲಿ ರಾಕೆಟ್‌ ಉಡಾವಣೆಗೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಹವಾಮಾನ ಪರಿಸ್ಥಿತಿಯನ್ನು ಆಧರಿಸಿ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಲಾಗುವುದು’ ಎಂದು ಸ್ಕೈರೂಟ್‌ ಏರೊಸ್ಪೇಸ್‌ ಸಿಇಒ, ಸಹ ಸಂಸ್ಥಾಪಕ ಪವನ್‌ ಕುಮಾರ್ ಚಂದನ ತಿಳಿಸಿದ್ದಾರೆ.

ಇಸ್ರೊ ಮತ್ತು ಇನ್‌–ಸ್ಪೇಸ್‌ ನೀಡಿದ್ದ ಸಹಕಾರದಿಂದಾಗಿ ಈ ರಾಕೆಟ್‌ಅನ್ನು ಕಡಿಮೆ ಅವಧಿಯಲ್ಲಿ ಅಭಿವೃದ್ಧಿಗೊಳಿಸಲಾಯಿತು. ಖ್ಯಾತ ವಿಜ್ಞಾನಿ ವಿಕ್ರಮ್‌ ಸಾರಾಭಾಯ್‌ ಅವರ ಸ್ಮರಣಾರ್ಥವಾಗಿ ‘ವಿಕ್ರಮ್‌–ಎಸ್’ ಎಂದು ಈ ರಾಕೆಟ್‌ಗೆ ಹೆಸರು ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ವಿಕ್ರಮ್‌–ಎಸ್‌ ರಾಕೆಟ್‌ ಒಂದೇ ಹಂತದ ಬಾಹ್ಯಾಕಾಶದ ಕಕ್ಷೆ ತಲುಪುವ ನೌಕೆಯಾಗಿದೆ. ಇದು ಮೂರು ಪೇಲೋಡ್‌ಗಳನ್ನು ಹೊತ್ತೊಯ್ಯಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಾಗ ಭರತ್‌ ಡಾಕ ತಿಳಿಸಿದ್ದಾರೆ.

ಬಾಹ್ಯಾಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳು ಭಾಗಿಯಾಗುವುದಕ್ಕೆ 2020ರಲ್ಲಿ ಅವಕಾಶ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT