ಗುರುವಾರ , ಅಕ್ಟೋಬರ್ 22, 2020
22 °C

'ರಾಹುಲ್ ಗಾಂಧಿ 'ಭಾರತ ದರ್ಶನ' ಮಾಡುವುದಕ್ಕಿಂತ ರಾಜಸ್ಥಾನಕ್ಕೆ ಭೇಟಿ ನೀಡಲಿ'

ಎಎನ್‌ಐ‌ Updated:

ಅಕ್ಷರ ಗಾತ್ರ : | |

Prakash Javadekar

ನವದೆಹಲಿ: ಉತ್ತರ ಪ್ರದೇಶದ ಹಾಥರಸ್ ಮತ್ತು ಪಂಜಾಬ್‌ಗೆ ಇತ್ತೀಚೆಗೆ ಭೇಟಿ ನೀಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮೇಲೆ ಪರೋಕ್ಷವಾಗಿ ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, 'ಭಾರತ ದರ್ಶನ' ಮಾಡುವ ಬದಲು ರಾಜಸ್ಥಾನಕ್ಕೆ ಭೇಟಿ ನೀಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಕರೌಲಿಯ ದೇವಸ್ಥಾನಕ್ಕೆ ಸೇರಿದ ಜಾಗವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ ಕೆಲವು ಗೂಂಡಾಗಳು ಅರ್ಚಕನನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕೆಲ ಅಪರಾಧಿಗಳು, ಎಕೆ -47 ರೈಫಲ್‌ಗಳೊಂದಿಗೆ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ, ಅಲ್ಲಿಯೇ ಇದ್ದ ಸಹಚರನನ್ನು ಕರೆದೊಯ್ದಿದ್ದಾರೆ. ರಾಜಸ್ಥಾನದ ಹಲವೆಡೆ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ರಾಜ್ಯ ಸರ್ಕಾರಕ್ಕೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಭಾರತ ದರ್ಶನ ಮಾಡುವ ಬದಲು' ರಾಜಸ್ಥಾನದ ಈ ಜಿಲ್ಲೆಗಳಿಗೆ ಹೋಗಬೇಕೆಂದು ರಾಹುಲ್ ಅವರಿಗೆ ಸಲಹೆ ನೀಡಿದರು. ಅವರು ರಾಜಕೀಯವನ್ನು ಹೊರತುಪಡಿಸಿ ಏನನ್ನೂ ಮಾಡುವುದಿಲ್ಲ. ಈ ಘೋರ ಅಪರಾಧಗಳ ಬಗ್ಗೆ ಅವರು ಅರಿತುಕೊಳ್ಳಬೇಕು ಮತ್ತು ತಮ್ಮ ಪಕ್ಷದ ಸರ್ಕಾರದ ವೈಫಲ್ಯಕ್ಕೆ ರಾಜಸ್ಥಾನಕ್ಕೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕರೌಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ದೇವಾಲಯದ ಭೂಮಿಯನ್ನು ಅತಿಕ್ರಮಣ ಮಾಡಿಕೊಳ್ಳಲು ಮುಂದಾಗಿದ್ದ ದುಷ್ಕರ್ಮಿಗಳು ಅರ್ಚಕನನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಕೈಲಾಶ್ ಮೀನಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು