ಭಾನುವಾರ, ಆಗಸ್ಟ್ 14, 2022
20 °C

ರಾಜಸ್ಥಾನದ ಎಲ್ಲ ಶಾಸಕರಿಗೆ ‘ಐಫೋನ್ 13’ ಉಡುಗೊರೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಜೈಪುರ: ರಾಜಸ್ಥಾನದ ಎಲ್ಲ 200 ಶಾಸಕರಿಗೆ ಅಶೋಕ್ ಗೆಹಲೋತ್ ಸರ್ಕಾರವು ‘ಐಫೋನ್ 13’ ಅನ್ನು ಉಡುಗೊರೆ ನೀಡಿದೆ.

ರಾಜಸ್ಥಾನ ವಿಧಾನಸಭೆಯಲ್ಲಿ ಬುಧವಾರ ಬಜೆಟ್‌ ಮಂಡಿಸಲಾಗಿದ್ದು, ಬಳಿಕ ಉಡುಗೊರೆ ನೀಡಲಾಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಬಜೆಟ್ ಪ್ರತಿಯ ಜತೆಗೆ ಎಲ್ಲ ಶಾಸಕರಿಗೆ ‘ಐಪ್ಯಾಡ್‌’ಗಳನ್ನು ನೀಡಲಾಗಿತ್ತು.

ಸಾಮಾನ್ಯವಾಗಿ ಬಜೆಟ್ ಮಂಡನೆ ಬಳಿಕ ಸದನದಿಂದ ತೆರಳುವಾಗ ಶಾಸಕರಿಗೆ ಬಜೆಟ್ ಪ್ರತಿಯುಳ್ಳ ಬ್ರೀಫ್‌ಕೇಸ್ ನೀಡಲಾಗುತ್ತದೆ. ಆದರೆ, ಈ ಬಾರಿ ಬಜೆಟ್ ಪ್ರತಿಯ ಜತೆಗೆ ‘ಐಫೋನ್ 13’ ಒಳಗೊಂಡ ಸ್ಮಾರ್ಟ್‌ ಬ್ರೀಫ್‌ಕೇಸ್ ನೀಡಲಾಗಿದೆ ಎಂದು ‘ಎನ್‌ಡಿಟಿವಿ’ ವರದಿ ಮಾಡಿದೆ.

ಇದನ್ನೂ ಓದಿ: ಆ್ಯಪಲ್ ಐಫೋನ್ 13: ಉತ್ತಮ ಕ್ಯಾಮೆರಾ, ಸಿನೆಮ್ಯಾಟಿಕ್ ಮೋಡ್, ಆಕರ್ಷಕ ನೋಟ

ಈ ಉಡುಗೊರೆಗೆ ಹೆಚ್ಚಿನ ಶಾಸಕರು ಪಕ್ಷಾತೀತವಾಗಿ ಮೆಚ್ಚುಗೆ ಸೂಚಿಸಿದ್ದಾರೆ. ಉಡುಗೊರೆ ನೀಡಲು ರಾಜ್ಯ ಸರ್ಕಾರಕ್ಕೆ ಸುಮಾರು ₹1.5 ಕೋಟಿ ವೆಚ್ಚವಾಗಿದೆ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು