ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ರಾಷ್ಟ್ರೀಯ ದೂರಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ) ಜೋಶಿಮಠದ ಉಪಗ್ರಹ ಚಿತ್ರಗಳನ್ನು ಮತ್ತು ಭೂ ಕುಸಿತದ ಕುರಿತ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ಇಡೀ ಪಟ್ಟಣವೇ ಕುಸಿಯಬಹುದು ಎಂದು ಇಸ್ರೋ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಚಿತ್ರಗಳನ್ನು ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ತೆಗೆಯಲಾಗಿದೆ. ಕುಸಿಯುತ್ತಿರುವ ಪ್ರದೇಶಗಳ ಉಪಗ್ರಹ ಚಿತ್ರಗಳನ್ನು ಹೈದರಾಬಾದ್‌ನಲ್ಲಿರುವ ಎನ್‌ಆರ್‌ಎಸ್‌ಸಿ ಬಿಡುಗಡೆ ಮಾಡಿದೆ.

ಸೇನೆಯ ಹೆಲಿಪ್ಯಾಡ್, ನರಸಿಂಹ ದೇವಸ್ಥಾನವೂ ಒಳಗೊಂಡಂತೆ ಇಡೀ ಜೋಶಿಮಠ ಪಟ್ಟಣವನ್ನು ಸೂಕ್ಷ್ಮ ವಲಯ ಎಂದು ಇಸ್ರೋ ಗುರುತಿಸಿದೆ.

ಇಸ್ರೋದ ಪ್ರಾಥಮಿಕ ವರದಿಯ ಆಧಾರದ ಮೇಲೆ, ಉತ್ತರಾಖಂಡ ಸರ್ಕಾರವು ಅಪಾಯ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಈ ಪ್ರದೇಶಗಳಲ್ಲಿರುವ ಜನರನ್ನು ಆದ್ಯತೆಯ ಮೇಲೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ವರದಿಯ ಪ್ರಕಾರ, 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ ಕುಸಿದಿದೆ. ಆದರೆ 2022ರ ಡಿಸೆಂಬರ್ 27ರಿಂದ 2023 ಜನವರಿ 8ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ. ಈ 12 ದಿನಗಳ ಅಂತರದಲ್ಲಿ ಪಟ್ಟಣ 5.4 ಸೆಂ.ಮೀ ನಷ್ಟು ಕುಸಿದಿದೆ.

ಭೂ ಕುಸಿತದಿಂದ ಜೋಶಿಮಠ-ಔಲಿ ರಸ್ತೆಯೂ ನಾಶವಾಗಲಿದೆ ಎಂದು ಇಸ್ರೋ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇಸ್ರೋದ ಪ್ರಾಥಮಿಕ ವರದಿಯಲ್ಲಿನ ಈ ಅಂಶಗಳು ಆತಂಕಕ್ಕೆ ಕಾರಣವಾಗಿವೆ.

ಜೋಶಿಮಠ ಕುಸಿಯುತ್ತಿರುವುದೇಕೆ?

ಮಾನವ ಮತ್ತು ನಿಸರ್ಗ ಮೂಲದ ಅಂಶಗಳು ಜೋಶಿಮಠ ಊರಿನ ಅವನತಿಗೆ ಕಾರಣವಾಗಿವೆ ಎಂದು 'ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ'ಯ ನಿರ್ದೇಶಕ ಕಲಾಚಂದ್ ಸೇನ್ ಅಭಿಪ್ರಾಯಪಟ್ಟಿದ್ದಾರೆ.

ಸಮಸ್ಯೆಗೆ ಇತ್ತೀಚಿನ ಅಂಶಗಳು ಮಾತ್ರ ಕಾರಣವಲ್ಲ, ಹಲವಾರು ವರ್ಷಗಳಿಂದ ಸಮಸ್ಯೆ ಬೆಳೆಯುತ್ತಾ ಬಂದಿದೆ ಎಂದು ಅವರು ವಿವರಿಸಿದ್ದಾರೆ.

‘ಜೋಶಿಮಠ ಊರು ಕುಸಿತವಾಗಲು, ಅಲ್ಲಿನ ಕಟ್ಟಡಗಳ ಅಡಿಪಾಯಗಳು ದುರ್ಬಲವಾಗಲು ಮೂರು ಮುಖ್ಯ ಕಾರಣಗಳಿವೆ. ಶತಮಾನಕ್ಕೂ ಹೆಚ್ಚು ಹಿಂದೆ ಭೂಕಂಪದಿಂದ ಉಂಟಾದ ಭೂಕುಸಿತದ ಅವಶೇಷಗಳ ಮೇಲೆ ಊರು ಅಭಿವೃದ್ಧಿಯಾಗಿದೆ. ಈ ಪ್ರದೇಶವು ಭೂಕಂಪನ ವಲಯ ‘V’ ಯಲ್ಲಿ ನೆಲೆಗೊಂಡಿದೆ. ಹೀಗಾಗಿ ಈ ಸ್ಥಳದಲ್ಲಿ ಹೆಚ್ಚಾಗಿ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ, ಮಣ್ಣಿನಡಿ ನೀರು ಜಿನುಗುತ್ತಲೇ ಇರುತ್ತದೆ. ಈ ಕಾರಣದಿಂದಾಗಿ ಕಾಲಾನಂತರದಲ್ಲಿ ನೆಲದಡಿಯ ಬಂಡೆಗಳು ಧಾರಣ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಇಡೀ ಪ್ರದೇಶ ದುರ್ಬಲವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಭೂಕುಸಿತದ ಅವಶೇಷಗಳ ಮೇಲೆ ಜೋಶಿಮಠದ ರಚನೆಯಾಗಿರುವ ಬಗ್ಗೆ ಅಟ್ಕಿನ್ಸ್ 1886ರಲ್ಲಿ ಹಿಮಾಲಯನ್ ಗೆಜೆಟಿಯರ್‌ನಲ್ಲಿ ಮೊದಲ ಬಾರಿಗೆ ಬರೆದಿದ್ದಾರೆ. ಮಿಶ್ರಾ ಸಮಿತಿಯು 1976 ರಲ್ಲಿ ತನ್ನ ವರದಿಯಲ್ಲಿ ಇದೇ ಅಂಶವನ್ನೇ ಒತ್ತಿ ಹೇಳಿದೆ’ ಎಂದು ಸೇನ್ ಹೇಳಿದರು.

ಕಳೆದ ವರ್ಷ ಋಷಿಗಂಗಾ ಮತ್ತು ಧೌಲಿಗಂಗಾ ನದಿಗಳಲ್ಲಿ ಉಂಟಾದ ಪ್ರವಾಹ, ಹಿಮಾಲಯದ ನದಿಗಳು ಮತ್ತು ಭಾರೀ ಮಳೆಯು ಇಲ್ಲಿನ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾನವ ಮೂಲದ ಕಾರಣ...

ಉತ್ತರಾಖಂಡದಲ್ಲಿ ಅದರಲ್ಲಿಯೂ ವಿಶೇಷವಾಗಿ ಜೋಶಿಮಠವು ಇರುವ ಚಮೋಲಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳು ನಿರಂತರವಾಗಿ ನಡೆಯುತ್ತಿವೆ. 2021ರ ಮೇಯಲ್ಲಿ ಚಮೋಲಿ ಜಿಲ್ಲೆಯಲ್ಲಿ ಭೂಕಂಪ ಉಂಟಾಗಿತ್ತು. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.3ರಷ್ಟಿತ್ತು. ಭೂಕಂಪನದ ಕೇಂದ್ರವು ಜೋಶಿಮಠದ ಸಮೀಪವೇ ಇತ್ತು.

2021ರ ಫೆಬ್ರುವರಿಯಲ್ಲಿ ತಪೋವನ ವಿಷ್ಣುಗಡ ಜಲವಿದ್ಯುತ್ ಯೋಜನೆಯ ಅಣೆಕಟ್ಟೆಯ ಸಮೀಪ ಸಂಭವಿಸಿದ್ದ ಹಿಮಕುಸಿತದಲ್ಲಿ 204 ಮಂದಿ ನಾಪತ್ತೆಯಾಗಿದ್ದರು. ಅದರಲ್ಲಿ 83 ಮಂದಿಯ ಮೃತದೇಹ ಮತ್ತು 36 ಮಂದಿಯ ದೇಹದ ಭಾಗಗಳು ಸಿಕ್ಕಿದ್ದವು. ಇಂತಹ ದುರಂತಗಳು ಸಾಮಾನ್ಯ ಎಂಬಂತೆ ಇಲ್ಲಿ ಘಟಿಸುತ್ತಿವೆ.

ಈ ಪ್ರದೇಶದಲ್ಲಿ 15,000ಕ್ಕೂ ಹೆಚ್ಚು ಹಿಮಗಲ್ಲುಗಳಿವೆ. ಪ್ರತಿ ದಶಕದಲ್ಲಿ ಇವು 100ರಿಂದ 200 ಅಡಿಯಷ್ಟು ಕೆಳಕ್ಕೆ ಇಳಿಯುತ್ತಿವೆ. ಈ ಹಿಮಗಲ್ಲುಗಳು ಅತ್ಯಂತ ವೇಗವಾಗಿ ಕರಗುತ್ತಿವೆ. ಹೀಗೆ ಕರಗಿದ ಹಿಮಗಲ್ಲುಗಳು ದಿಢೀರ್ ಹಿಮಸರೋವರಗಳನ್ನು ಸೃಷ್ಟಿಸುತ್ತವೆ. ನೀರನ್ನು ಹಿಡಿದಿಟ್ಟುಕೊಳ್ಳಲಾಗದ ಮಣ್ಣು ಬಿರುಕು ಬಿಡುತ್ತದೆ ಮತ್ತು ದಿಢೀರ್ ಪ್ರವಾಹಗಳು ಉಂಟಾಗುತ್ತವೆ. 2021ರಲ್ಲಿ ಧೌಲಿಗಂಗಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ 70ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

ಅಲಕನಂದಾ–ಭಾಗೀರಥಿ ನದಿಗೆ ಅಣೆಕಟ್ಟೆ ಕಟ್ಟಲೇಬಾರದು ಎಂದು ಪರಿಣತರ ಸಮಿತಿಯು ಶಿಫಾರಸು ಮಾಡಿತ್ತು. ಹಿಮಗಲ್ಲು ಪ್ರದೇಶದಲ್ಲಿ ಅಣೆಕಟ್ಟೆ ನಿರ್ಮಿಸಬೇಡಿ ಎಂದು ಸುಪ್ರೀಂ ಕೋರ್ಟ್ ಕೂಡ 2014ರಲ್ಲಿ ಹೇಳಿತ್ತು. ಆದರೆ ಸರ್ಕಾರವು ಈ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅಣೆಕಟ್ಟೆ ನಿರ್ಮಾಣ ಮಾಡಲಾಯಿತು.

ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರೀನಾಥವನ್ನು ಸಂಪರ್ಕಿಸುವ 900 ಕಿ.ಮೀ. ಉದ್ದದ ಹೆದ್ದಾರಿ–ಚಾರ್ ಧಾಮ್ ಹೆದ್ದಾರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ₹12,000 ಕೋಟಿ ವೆಚ್ಚದ ಯೋಜನೆ ಇದು. ನಿರ್ಮಾಣ ಕಾಮಗಾರಿಗಳನ್ನು ನಡೆಸಲೇಬಾರದು ಎಂದು ಪರಿಣತರು ಹಲವು ಬಾರಿ ಹೇಳಿದ್ದಾರೆ. ಆದರೆ, ಉತ್ತರಾಖಂಡದಲ್ಲಿ ಉಂಟಾದ ಪ್ರವಾಹಕ್ಕೆ ಈ ಯೋಜನೆ ಕಾರಣ ಅಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು 2021ರಲ್ಲಿ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದರು.

ಇವುಗಳನ್ನೂ ಓದಿ

ಸಾಕ್ಷಾತ್ ವರದಿ | ಯಂತ್ರಗಳ ಮೊರೆತ: ‘ಅಲಕಾ’ ಕಣ್ಣೀರು

ಜೋಶಿಮಠ: ಅಸುರಕ್ಷಿತ 2 ಹೋಟೆಲ್ಗಳ ಕಟ್ಟಡಗಳ ತೆರವು ಶುರು

ನಾಗೇಶ ಹೆಗಡೆ ಲೇಖನ ವಿಜ್ಞಾನ ವಿಶೇಷ: ದೇವಭೂಮಿಯಲ್ಲಿ ಜೋಡಿ ತಾಂಡವ

ಸಂಪಾದಕೀಯ: ಜೋಶಿಮಠದಲ್ಲಿ ಬಿರುಕು ಎಚ್ಚರಿಕೆ ನಿರ್ಲಕ್ಷಿಸಿದ್ದರ ಪರಿಣಾಮ

ಉತ್ತರಾಖಂಡದ ಜೋಶಿಮಠ ಎಂಬ ಊರು ಕುಸಿಯುತ್ತಿರುವುದೇಕೆ? ಇಲ್ಲಿದೆ ಮಾಹಿತಿ

ಆಳ–ಅಗಲ: ಹಿಮಾಲಯ ತಪ್ಪಲಿನ ಜೋಶಿಮಠ ಪಟ್ಟಣಕ್ಕೆ ಕುಸಿತದ ಭೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.