ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿರ್ಗಮಿಸುವ ಮುನ್ನ ಸೀಟು ಕಾಯ್ದಿರಿಸಿದ 2ನೇ ಪಟ್ಟಿ ಕೈಬಿಡಲು ಸಲಹೆ

Last Updated 5 ಡಿಸೆಂಬರ್ 2021, 21:31 IST
ಅಕ್ಷರ ಗಾತ್ರ

ನವದೆಹಲಿ: ‘ರೈಲು ನಿರ್ಗಮಿಸುವ ಮುನ್ನ 30 ಮತ್ತು 5 ನಿಮಿಷದ ನಡುವೆ ಸಿದ್ಧಪಡಿಸುವ ಸೀಟು ಕಾಯ್ದಿರಿಸಿದ ವಿವರಗಳ ಎರಡನೇ ಪಟ್ಟಿಯನ್ನು ಕೈಬಿಡಬೇಕು’ ಎಂದು ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೆ ಇಲಾಖೆಗೆ ಸಲಹೆ ಮಾಡಿದೆ.

ಸೀಟು ರದ್ಧತಿ ಆಧರಿಸಿ ಕಾಯ್ದಿ ರಿಸುವಿಕೆ (ಆರ್‌ಎಸಿ) ಮತ್ತು ನಿರೀಕ್ಷಣಾ ಪಟ್ಟಿಯಲ್ಲಿ ಸಾವಿರಾರು ಪ್ರಯಾಣಿಕರು ಇರುವಾಗ, 30–5 ನಿಮಿಷದ ಅವಧಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಯಾವುದೇ ತರ್ಕ ಇಲ್ಲ ಎಂದು ಸಮಿತಿ ಹೇಳಿದೆ. ಈ ಅವಧಿಯಲ್ಲಿ ಟಿಕೆಟ್‌ ಬುಕ್ಕಿಂಗ್ ಮಾಡಿದರೂ ಸೀಟು ಲಭ್ಯತೆ ಖಾತರಿಯಾಗುವ ಸಂಭವವೂ ಇರುವುದಿಲ್ಲ ಎಂದು ಪ್ರತಿಪಾದಿಸಿದೆ.

‘ರೈಲ್ವೆಯಲ್ಲಿ ಟಿಕೆಟ್‌ ಕಾಯ್ದಿರಿಸಿರುವ ವ್ಯವಸ್ಥೆ’ ಕುರಿತ ವರದಿಯಲ್ಲಿ ಸಮಿತಿಯು, ಅಲ್ಪಾವಧಿಯಲ್ಲಿ ಪ್ರಯಾಣ ಕಾರ್ಯಕ್ರಮ ನಿರ್ಧರಿಸುವವರಿಗೆ ಸದ್ಯಕ್ಕೆ ತತ್ಕಾಲ್‌ ಸೌಲಭ್ಯವಿದೆ. ರೈಲು ನಿರ್ಗಮನದ 4–5 ಗಂಟೆ ಮೊದಲು ಟಿಕೆಟ್‌ ಕಾಯ್ದಿರಿಸುವಿಕೆ ಕುರಿತಂತೆ ಮೊದಲ ಪಟ್ಟಿ ಸಿದ್ಧವಾದ ಬಳಿಕ ಖಾಲಿ ಉಳಿಯುವ ಎಲ್ಲ ಸೀಟುಗಳನ್ನು ಸ್ವಯಂ ಚಾಲಿತವಾಗಿ ಆರ್‌ಎಸಿ/ನಿರೀಕ್ಷಣಾ ಪಟ್ಟಿಯಲ್ಲಿ ಇರುವ ಪ್ರಯಾಣಿಕರಿಗೆ ಹಂಚಿಕೆ ಮಾಡಬೇಕು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT