ಗುರುವಾರ , ಆಗಸ್ಟ್ 11, 2022
22 °C

ಮಧ್ಯಪ್ರದೇಶ ಸರ್ಕಾರಕ್ಕೆ ₹ 8 ಸಾವಿರ ಕೋಟಿ ಸಾಲ ಹೇರಿದ ಕಮಲನಾಥ್: ಸಿಂಧಿಯಾ ಆರೋಪ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೊರೆನಾ: ಇದಕ್ಕೂ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಮಲನಾಥ್‌ ಅವರು ಈಗಿನ ಶಿವರಾಜ್‌ ಸಿಂಗ್‌ ಚೌಹಾಣ್‌ ಸರ್ಕಾರದ ಮೇಲೆ ₹ 8 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದು ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಆರೋಪಿಸಿದ್ದಾರೆ.

15 ತಿಂಗಳು ಇದ್ದ ಈ ಹಿಂದಿನ ಸರ್ಕಾರವು, ಸಾಲಮನ್ನಾ ಮಾಡದೆ ರೈತರಿಗೂ ದ್ರೋಹ ಮಾಡಿದೆ ಎಂದು ಕಿಡಿ ಕಾರಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಧಿಯಾ, ‘ಯಾರಾದರೂ ಜನರಿಗೆ ಮೋಸ ಮಾಡಿದವರು ಇದ್ದರೆ, ಅದು ಕಮಲನಾಥ್‌ ಮತ್ತು ದಿಗ್ವಿಜಯ್‌ ಸಿಂಗ್‌ ಮಾತ್ರ. ಅವರು ಅಧಿಕಾರದಲ್ಲಿದ್ದ 15 ತಿಂಗಳಲ್ಲಿಯೂ ರೈತರ ಸಾಲ ಮನ್ನಾ ಮಾಡಲಿಲ್ಲ. ₹ 8 ಸಾವಿರ ಕೋಟಿ ಮೊತ್ತದ ಸಾಲದ ಹೊರೆಯನ್ನು ಶಿವರಾಜ್‌ ಸಿಂಗ್ ಸರ್ಕಾರದ ಮೇಲೆ ಹೇರಿದ್ದಾರೆ’ ಎಂದು ಹೇಳಿದ್ದಾರೆ.

ಇದೇವೇಳೆ ಮುಖ್ಯಮಂತ್ರಿ ಚೌಹಾಣ್‌ ಅವರು, ಒಂದು ರೂಪಾಯಿಗೆ 1 ಕೆಜಿ ಗೋಧಿ ಖರೀದಿಸಲು ಸಾಧ್ಯವಾಗದ ಯಾವುದೇ ಜಾತಿ ಅಥವಾ ಸಮುದಾಯದ ಬಡವರು ಸೆಪ್ಟೆಂಬರ್‌ 16ರಿಂದ 1 ರೂಪಾಯಿಗೆ ಒಂದು ಕೆಜಿ ಗೋಧಿ ಖರೀದಿಸಲಿದ್ದಾರೆ. ಇನ್ನುಮುಂದೆ ಯಾವೊಬ್ಬ ಬಡವರೂ ಹಸಿವಿನಿಂದ ಬಳಲುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು