ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಕೇರಳದಲ್ಲಿ ಶೇ 73.58, ತಮಿಳುನಾಡಿನಲ್ಲಿ ಶೇ 65.11 ಮತದಾನ

Last Updated 6 ಏಪ್ರಿಲ್ 2021, 15:18 IST
ಅಕ್ಷರ ಗಾತ್ರ

ನವದೆಹಲಿ: ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗೆ ಮಂಗಳವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಯಶಸ್ವಿಯಾಗಿದೆ.

ಸಂಜೆ 7ರ ವರೆಗೂ ಕೇರಳದಲ್ಲಿ ಶೇ 73.58, ಅಸ್ಸಾಂನಲ್ಲಿ ಶೇ 82.29, ಪುದುಚೇರಿಯಲ್ಲಿ ಶೇ 78.13, ತಮಿಳುನಾಡಿನಲ್ಲಿ ಶೇ 65.11 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ 77.68ರಷ್ಟು ಮತದಾನವಾಗಿದೆ.

ಕೇರಳದಲ್ಲಿ 140 ಕ್ಷೇತ್ರಗಳ 40,771 ಮತಗಟ್ಟೆಗಳಲ್ಲಿ 2.74 ಕೋಟಿ ಮತದಾರರು ಮತದಾನದ ಹಕ್ಕು ಚಲಾಯಿಸಿದ್ದಾರೆ. ಸಂಜೆ 6ರಿಂದ 7ರ ವರೆಗೂ ಕೋವಿಡ್‌–19 ರೋಗಿಗಳಿಗೆ ಹಾಗೂ ಸೋಂಕಿನಿಂದಾಗಿ ಪ್ರತ್ಯೇಕ ವಾಸದಲ್ಲಿದ್ದವರು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 957 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು ಮತದಾನದ ಪೈಕಿ ಶೇ 73.69ರಷ್ಟು ಪುರುಷರು, ಶೇ 73.48 ಮಹಿಳೆಯರು ಹಾಗೂ ಶೇ 37.37ರಷ್ಟು ಲೈಂಗಿಕ ಅಲ್ಪಸಂಖ್ಯಾತ ಮತದಾರರು ಮತದಾನ ನಡೆಸಿದ್ದಾರೆ.

ಕೇರಳದಲ್ಲಿ 2016ರ ವಿಧಾನಸಭಾ ಚುನಾವಣೆಯಲ್ಲಿ ಶೇ 77.53ರಷ್ಟು ಮತದಾನವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 77.84 ಮತದಾನ ದಾಖಲಾಗಿತ್ತು.

ತಮಿಳುನಾಡು: 234 ಕ್ಷೇತ್ರಗಳು, 3,998 ಅಭ್ಯರ್ಥಿಗಳು, 6.28 ಕೋಟಿ ಮತದಾರರು
ಪುದುಚೇರಿ: 30 ಕ್ಷೇತ್ರಗಳು, 324 ಅಭ್ಯರ್ಥಿಗಳು, 10.03 ಲಕ್ಷ ಮತದಾರರು
ಪಶ್ಚಿಮ ಬಂಗಾಳ: 31 ಕ್ಷೇತ್ರಗಳು, 205 ಅಭ್ಯರ್ಥಿಗಳು, 75.8 ಲಕ್ಷ ಮತದಾರರು
ಅಸ್ಸಾಂ: 40 ಕ್ಷೇತ್ರಗಳು, 337 ಅಭ್ಯರ್ಥಿಗಳು, 79.19 ಲಕ್ಷ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT