ಸೋಮವಾರ, 5 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಹೊಲದಲ್ಲಿ 6.47 ಕ್ಯಾರಟ್ ವಜ್ರ ಪತ್ತೆ: ಖುಲಾಯಿಸಿದ ರೈತನ ಅದೃಷ್ಟ

ಗಣಿಗಾರಿಕೆ ವೇಳೆ ಪತ್ತೆಯಾದ 6.47 ಕ್ಯಾರಟ್‌ ವಜ್ರ
Last Updated 28 ಆಗಸ್ಟ್ 2021, 7:02 IST
ಅಕ್ಷರ ಗಾತ್ರ

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ರೈತನಿಗೆ ಎರಡು ವರ್ಷಗಳಲ್ಲಿ ಆರನೇ ಬಾರಿ ಅದೃಷ್ಟ ಖುಲಾಯಿಸಿದೆ. ಸರ್ಕಾರದಿಂದ ಲೀಸ್‌ ಮೇಲೆ ಪಡೆದ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಉತ್ಕೃಷ್ಟ ದರ್ಜೆಯ 6.47 ಕ್ಯಾರಟ್‌ ತೂಗುವ ವಜ್ರ ದೊರೆತಿದೆ.

ರೈತ ಪ್ರಕಾಶ ಮಜುಂದಾರ್‌ ಅವರಿಗೆ ಜಿಲ್ಲೆಯ ಜಾರುಪುರ್‌ ಗ್ರಾಮದ ಗಣಿಯಲ್ಲಿ ಶುಕ್ರವಾರ ಈ ಅತ್ಯುತ್ತಮ ದರ್ಜೆಯ ವಜ್ರ ದೊರೆತಿದೆ ಎಂದು ಈ ಭಾಗದ ವಜ್ರ ಗಣಿಗಾರಿಕೆ ಉಸ್ತುವಾರಿ ಅಧಿಕಾರಿಯಾಗಿರುವ ನೂತನ್‌ ಜೈನ್ ತಿಳಿಸಿದ್ದಾರೆ.

ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕಿಡಲಾಗುವುದು. ಅಲ್ಲಿ ಸರ್ಕಾರದ ಮಾರ್ಗಗರ್ಶಿ ಸೂತ್ರಗಳ ಅನ್ವಯ ಇದರ ಬೆಲೆ ನಿರ್ಧಾರವಾಗಲಿದೆ ಎಂದು ನೂತನ್ ತಿಳಿಸಿದ್ದಾರೆ.

ಹರಾಜಿನಿಂದ ಬರುವ ಹಣದ ಪಾಲನ್ನು, ಗಣಿಗಾರಿಕೆಯಲ್ಲಿ ತೊಡಗಿದ ಇತರ ನಾಲ್ಕು ಮಂದಿ ಪಾಲುದಾರರ ಜೊತೆ ಹಂಚಿಕೊಳ್ಳುತ್ತೇನೆ ಎಂದು ಮಜುಂದಾರ್ ತಿಳಿಸಿದ್ದಾರೆ. ‘ನಾವು ಐದು ಮಂದಿ ಪಾಲುದಾರರಿದ್ದೇವೆ. 6.47 ಕ್ಯಾರಟ್‌ತೂಗುವ ಈ ವಜ್ರವನ್ನು ಸರ್ಕಾರದ ವಜ್ರ ಖಜಾನೆಯಲ್ಲಿ ಭದ್ರವಾಗಿಡಲಾಗಿದೆ’ ಎಂದು ಶುಕ್ರವಾರ ವರದಿಗಾರರಿಗೆ ತಿಳಿಸಿದ್ದಾರೆ.

ಕಳೆದ ವರ್ಷ ತಮಗೆ ಗಣಿಯಿಂದ 7.44 ಕ್ಯಾರಟ್‌ ವಜ್ರ ದೊರಕಿತ್ತು. ಇದರ ಜೊತೆಗೆ 2 ರಿಂದ 2.5 ಕ್ಯಾರಟ್‌ ತೂಕದ ವಜ್ರಗಳೂ ದೊರೆತಿವೆ ಎಂದು ಸಂಭ್ರಮದಿಂದ ಹೇಳಿದ್ದಾರೆ.

ಸರ್ಕಾರದ ರಾಜಧನ ಮತ್ತು ತೆರಿಗೆ ಕಳೆದು ಉಳಿದ ಹಣವನ್ನು ರೈತನಿಗೆ ನೀಡಲಾಗುವುದು. ಖಾಸಗಿ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ 6.47 ಕ್ಯಾರಟ್‌ ವಜ್ರಕ್ಕೆ ಹರಾಜಿನಲ್ಲಿ ಸುಮಾರು ₹ 30 ಲಕ್ಷ ಸಿಗುವುದು ಪಕ್ಕಾ.

ಪನ್ನಾದಲ್ಲಿವಜ್ರದ ಸಂಪತ್ತು ಹೇರಳವಾಗಿದ್ದು, ಸರ್ಕಾರ ಸಣ್ಣ ಸಣ್ಣ ಜಮೀನುಗಳನ್ನು ಭೋಗ್ಯದ ಮೇಲೆ ರೈತರಿಗೆ ನೀಡುತ್ತದೆ. ಅವರಿಗೆ ಗಣಿಗಾರಿಕೆ ವೇಳೆ ಸಿಗುವ ವಜ್ರವನ್ನು ಜಿಲ್ಲಾ ಗಣಿಗಾರಿಕೆ ಕಚೇರಿಯಲ್ಲಿ ಠೇವಣಿಯಾಗಿಡಲು ಅವಕಾಶವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT