ಭಾನುವಾರ, ಏಪ್ರಿಲ್ 2, 2023
31 °C

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಆರ್‌ಎಸ್‌ಎಸ್‌ ವಿಚಾರ ಬೋಧನೆ: ಕಾಂಗ್ರೆಸ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂದೋರ್:‌ ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಆರ್‌ಎಸ್‌ಎಸ್‌ ನಾಯಕ ಡಾ.ಕೇಶವ್ ಹೆಡ್ಗೆವಾರ್‌ ಮತ್ತು ಜನಸಂಘದ ಸಂಸ್ಥಾಪಕ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಕುರಿತು ಬೋಧಿಸುವ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್‌ ಖಂಡಿಸಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಗ್ರೆಸ್‌ ನಾಯಕ ಸಜ್ಜನ್‌ ಸಿಂಗ್‌ ವರ್ಮಾ, ʼಇದೀಗ ವೈದ್ಯರು ಆಪರೇಷನ್‌ ಟೇಬಲ್‌ ಮೇಲೆ ಹೆಡ್ಗೆವಾರ್‌ ಮತ್ತು ಉಪಾಧ್ಯಾಯ ಅವರ ಪುಸ್ತಕಗಳನ್ನು ಇಟ್ಟುಕೊಂಡು ಆಪರೇಷನ್ ಮಾಡಲಿದ್ದಾರೆʼ ಎಂದು ಕುಟುಕಿದ್ದಾರೆ.

ಮುಂದುವರಿದು, ʼಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ಹೇರಲು ಬಿಜೆಪಿಯವರು ದೇಶವನ್ನು ವಿಭಜಿಸಬಹುದುʼ ಎಂದೂ ಆರೋಪಿಸಿದ್ದಾರೆ.

ವ್ಯಾಪಂ ಹಗರಣದ ಬಗ್ಗೆ ಮಾತನಾಡಿದ ವರ್ಮಾ, ದೇಶದ ಜನರು ವೈದ್ಯರನ್ನು ದೇವಧೂತರೆಂದು ಭಾವಿಸುತ್ತಾರೆ. ಆದರೆ, ಮಧ್ಯಪ್ರದೇಶದಲ್ಲಿನ ವ್ಯಾಪಂ ಹಗರಣ ವೈದ್ಯರನ್ನು ದೇವಧೂತರ ಬದಲು ದೆವ್ವಗಳನ್ನಾಗಿಸಿದೆʼ ಎಂದು ಪ್ರತಿಕ್ರಿಯಿಸಿದ್ದಾರೆ.

ಮಧ್ಯಪ್ರದೇಶ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ ಸಾರಂಗ್‌ ಅವರು, ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೇಶವ ಹೆಡ್ಗೆವಾರ್ ಮತ್ತು ಜನಸಂಘದ ಸಂಸ್ಥಾಪಕ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಬಗ್ಗೆ ಕಲಿಸಲಾಗುವುದು ಎಂದು ಭಾನುವಾರ ಘೋಷಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು