ಶನಿವಾರ, ಸೆಪ್ಟೆಂಬರ್ 18, 2021
24 °C

ಗರ್ಭಪಾತದ ಔಷಧ, ಕಿಟ್‌ ಮಾರಾಟ: ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ನೋಟಿಸ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ:  ಗರ್ಭಪಾತದ ಕಿಟ್‌ಗಳು ಮತ್ತು ಮಾತ್ರೆಗಳು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಿಸ್ಕ್ರಿಪ್ಷನ್ (ವೈದ್ಯರ ಸೂಚನೆ) ಇಲ್ಲದೆ ಮಾರಾಟವಾಗುತ್ತಿದೆ ಎಂದು ಹೇಳಿರುವ ‘ಮಹಾರಾಷ್ಟ್ರ ಆಹಾರ ಮತ್ತು ಔಷಧ ಪ್ರಾಧಿಕಾರ (ಎಫ್‌ಡಿಎ)’ ಶುಕ್ರವಾರ ಈ ಎರಡೂ ಇ-ಕಾಮರ್ಸ್ ಉದ್ದಿಮೆಗಳಿಗೆ ನೋಟಿಸ್ ನೀಡಿದೆ. 

‘ಔಷಧ ಮತ್ತು ಕಾಸ್ಮೆಟಿಕ್ ಕಾಯ್ದೆ– 1940’ರ ಪ್ರಕಾರ ನಿರ್ದಿಷ್ಟ ಔಷಧಗಳನ್ನು ಪ್ರಿಸ್ಕ್ರಿಪ್ಷನ್‌ ಇಲ್ಲದೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ನಿಷಿದ್ಧ ಎಂದು ಎಫ್‌ಡಿಎ ಹೇಳಿಕೆಯಲ್ಲಿ ತಿಳಿಸಿದೆ. 

ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಪ್ರಿಸ್ಕ್ರಿಪ್ಷನ್‌ ಇಲ್ಲದೇ ಗರ್ಭಪಾತದ ಔಷಧ, ಕಿಟ್‌ ಮಾರಾಟವಾಗುತ್ತಿರುವುದನ್ನು ಪತ್ತೆ ಮಾಡಲು ಎಫ್‌ಡಿಐ ಸ್ವತಃ ಅಮೆಜಾನ್‌ನಲ್ಲಿ ನಿರ್ದಿಷ್ಟ ಔಷಧವನ್ನು ಬುಕ್‌ ಮಾಡಿತು. ಆ ಆರ್ಡರ್‌ ಅನ್ನು ಉತ್ತರಪ್ರದೇಶ ಮತ್ತು ಒಡಿಶಾ ಮೂಲದ ಕೆಲವು ಪೂರೈಕೆದಾರರು ಸ್ವೀಕರಿಸಿದರು ಎಂದು ಎಫ್‌ಡಿಐ ತಿಳಿಸಿದೆ. 

ಫ್ಲಿಪ್‌ಕಾರ್ಟ್‌ನಲ್ಲೂ ಇದೇ ರೀತಿ ಆಗಿದೆ ಎಂದು ಎಫ್‌ಡಿಎ ಆರೋಪಿಸಿದೆ. ನೋಟಿಸ್‌ಗಳ ವಿವರವನ್ನು ಹೇಳಿಕೆಯಲ್ಲಿ  ಉಲ್ಲೇಖಿಸಿಲ್ಲ. ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಲು ಎಫ್‌ಡಿಎ 34 ಇ-ಕಾಮರ್ಸ್ ಪೋರ್ಟಲ್‌ಗಳನ್ನು ಪರಿಶೀಲಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು