ಶನಿವಾರ, ಡಿಸೆಂಬರ್ 3, 2022
20 °C

ಮರಾಠಿಯಲ್ಲಿ ಎಂಬಿಬಿಎಸ್‌ ಪಠ್ಯ: ಸದಸ್ಯರ ಸಮಿತಿ ಸ್ಥಾಪಿಸಿದ ಮಹಾರಾಷ್ಟ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ‘ಮರಾಠಿಯಲ್ಲಿ ಎಂಬಿಬಿಎಸ್‌ ಪಠ್ಯಪುಸ್ತಕ ಪ್ರಕಟಣೆಗೆ ಮಾರ್ಗಸೂಚಿ ರೂಪಿಸಲು ಏಳು ಸದಸ್ಯರ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿದೆ’ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

‘ಈ ಸಮಿತಿಯ ನೇತೃತ್ವವನ್ನು ಇಲಾಖೆಯ ಜಂಟಿ ನಿರ್ದೇಶಕ ಅಜಯ್‌ ಚಂದನ್‌ವಾಲೆ ಅವರು ವಹಿಸಿಕೊಳ್ಳಲಿದ್ದಾರೆ’ ಎಂದೂ ಅವರು ಹೇಳಿದರು.

ಕೆಲವು ದಿನಗಳ ಹಿಂದಷ್ಟೇ ಮಧ್ಯಪ್ರದೇಶ ಸರ್ಕಾರವು ಹಿಂದಿಯಲ್ಲಿ ಎಂಬಿಬಿಎಸ್‌ ಪುಸ್ತಕಗಳನ್ನು  ಪ್ರಕಟಿಸಿತ್ತು.

‘ಎಂಬಿಬಿಎಸ್‌ ಕೋರ್ಸ್‌ ಪುಸ್ತಕಗಳನ್ನು ಪ್ರಕಟಿಸಿದ ಮಧ್ಯಪ್ರದೇಶದ ಅಧಿಕಾರಿಗಳೊಂದಿಗೆ ನಾವು ಮಾತುಕತೆ ನಡೆಸಿದ್ದೇವೆ. ಸಮಿತಿ ಸದಸ್ಯರು ಸಭೆ ಸೇರಿ, ಮರಾಠಿಯಲ್ಲಿ ಎಂಬಿಬಿಎಸ್‌ ಕೋರ್ಸ್‌ ಪುಸ್ತಕಗಳ ಪ್ರಕಟಣೆಗೆ ಮಾರ್ಗಸೂಚಿಗಳನ್ನು ಚರ್ಚಿಸುವುದು ನಮ್ಮ ಮುಂದಿನ ಹಂತ. ಈ ಸಭೆ ಮುಂದಿನ ವಾರ ನಡೆಯಬಹುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು