ಭಾನುವಾರ, ಸೆಪ್ಟೆಂಬರ್ 25, 2022
22 °C

12 ಶಿವಸೇನಾ ಸಂಸದರು ನಮ್ಮ ಜತೆ ಸೇರಿದ್ದಾರೆ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಮುಂಬೈ: ಶಿವಸೇನಾದ 12 ಮಂದಿ ಸಂಸದರು ರಾಜ್ಯದ ಜನತೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮನ್ನು ಸೇರಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 12 ಮಂದಿ ಶಿವಸೇನಾ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

‘ಲೋಕಸಭೆಯಲ್ಲಿ ಶಿವಸೇನಾದ ನೂತನ ಗುಂಪಿನ ನಾಯಕ ರಾಹುಲ್ ಶೆವಾಲೆ ಆಗಿರಲಿದ್ದಾರೆ. ಭಾವನಾ ಗವಾಲಿ ಮುಖ್ಯ ವಿಪ್ ಆಗಿರಲಿದ್ದಾರೆ’ ಎಂದು ಶಿಂದೆ ಹೇಳಿದ್ದಾರೆ.

ಶಿಂದೆ ನೇತೃತ್ವದ 40 ಮಂದಿ ಶಿವಸೇನಾ ಶಾಸಕರು, 10 ಮಂದಿ ಪಕ್ಷೇತರರು ಹಾಗೂ ಇತರ ಶಾಸಕರು ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು, ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿದ ಕೆಲವೇ ದಿನಗಳಲ್ಲಿ ಈ ವಿದ್ಯಮಾನ ನಡೆದಿದೆ.

ಶ್ರೀಕಾಂತ್ ಶಿಂದೆ, ರಾಹುಲ್ ಶೆವಾಲೆ, ಭಾವನಾ ಗವಾಲಿ, ಹೇಮಂತ್ ಗೋಡ್ಸೆ, ರಾಜೇಂದ್ರ ಗವಿತ್, ಸದಾಶಿವ್ ಲೋಖಂಡೆ, ಹೇಮಂತ್ ಪಾಟೀಲ್, ಸಂಜಯ್ ಮಾಂಡಲೀಕ್, ಧೈರ್ಯಶೀಲ್ ಮಾನೆ, ಶ್ರೀರಂಗ್ ಬರ್ನೆ, ಕ್ರಪಾಲ್ ತುಮನೆ ಹಾಗೂ ಪ್ರತಾಪ್ ರಾವ್ ಜಾಧವ್ ಅವರು ಏಕನಾಥ ಶಿಂದೆ ಬಣ ಸೇರಿದ ಶಿವಸೇನಾ ಸಂಸದರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು