ಮುಂಬೈಗೆ ಬನ್ನಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ: ಬಂಡಾಯಗಾರರಿಗೆ ಉದ್ಧವ್ ಕರೆ

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದು ಶಿವಸೇನಾ ಅಧ್ಯಕ್ಷ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಬಂಡಾಯ ಶಾಸಕರನ್ನು ಮುಂಬೈಗೆ ಮರಳುವಂತೆ ಮಂಗಳವಾರ ಕೇಳಿಕೊಂಡಿದ್ದಾರೆ.
‘ಎಲ್ಲರೂ ಗುವಾಹಟಿಯಿಂದ ಮುಂಬೈಗೆ ಮರಳಿ ಬನ್ನಿ. ಜತೆಯಾಗಿ ಕುಳಿತುಕೊಂಡು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸೋಣ. ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ದಾರಿಯಿದೆ ಎಂಬ ಬಗ್ಗೆ ನನಗೆ ಖಾತರಿಯಿದೆ. ನಾವಿದನ್ನು ಮಾಡಬಹುದು’ ಎಂದು ಬಂಡಾಯ ಶಾಕರನ್ನು ಉದ್ದೇಶಿಸಿ ಬಿಡುಗಡೆ ಮಾಡಿರುವ ಸಂದೇಶದಲ್ಲಿ ಉದ್ಧವ್ ಉಲ್ಲೇಖಿಸಿದ್ದಾರೆ.
ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನ ಹೆಸರಿಸಿ: ಉದ್ಧವ್ಗೆ ಶಿಂಧೆ ಸವಾಲು
#Maharashtra CM and #ShivSena President #UddhavThackeray appeals rebels MLAs to return from #Guwahati to #Mumbai, sit across the table and thrash out issues. "I am sure there is a way out, we will sort it out," he said in a message @DeccanHerald #MaharashtraPoliticalCrisis
— Mrityunjay Bose (@MBTheGuide) June 28, 2022
ಸದ್ಯ, ಏಕನಾಥ ಶಿಂಧೆ ನೇತೃತ್ವದಲ್ಲಿ ಬಂಡಾಯ ಶಾಸಕರು ಅಸ್ಸಾಂನ ಗುವಾಹಟಿಯ ಐಷಾರಾಮಿ ಹೋಟೆಲ್ನಲ್ಲಿ ತಂಗಿದ್ದಾರೆ. ಉಭಯ ಬಣಗಳ ನಡುವೆ ಕಳೆದ ಕೆಲವು ದಿನಗಳಿಂದ ವಾಕ್ಸಮರವೂ ತೀವ್ರಗೊಂಡಿತ್ತು. ಇಂದು (ಮಂಗಳವಾರ) ಬೆಳಿಗ್ಗೆ ಉದ್ಧವ್ ಅವರನ್ನು ಉದ್ದೇಶಿಸಿ ಸಂದೇಶ ಬಿಡುಗಡೆ ಮಾಡಿದ್ದ ಶಿಂಧೆ, ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಸವಾಲೆಸೆದಿದ್ದರು.
ಅಸ್ಸಾಂನ ಬಿಜೆಪಿ ಶಾಸಕರು, ನಾಯಕರು ಹಾಗೂ ಸಚಿವರು ನಿಯಮಿತವಾಗಿ ಹೋಟೆಲ್ಗೆ ಭೇಟಿ ನೀಡಿ, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಪಕ್ಷೇತರ ಶಾಸಕರೂ ಸೇರಿದಂತೆ ಸುಮಾರು 50 ಮಂದಿ ಶಾಸಕರು ಶಿಂಧೆ ಜತೆ ಹೋಟೆಲ್ನಲ್ಲಿ ಇದ್ದಾರೆ ಎನ್ನಲಾಗಿದೆ.
* ‘ಮಹಾ‘ ಬಂಡಾಯ: ಭಿನ್ನರು ಜುಲೈ 12ರವರೆಗೆ ನಿರಾಳ
* ಉದ್ಧವ್ ಠಾಕ್ರೆ ಪರ ಕೇವಲ 15 ಶಾಸಕರು, ನಾಲ್ವರು ಸಚಿವರು
* ಮಹಾರಾಷ್ಟ್ರ ಬಿಕ್ಕಟ್ಟು ‘ಸುಪ್ರೀಂ’ಗೆ: ಭಿನ್ನರಿಗೆ ಶಿವಸೇನಾ ಬೆದರಿಕೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.