ಭಾನುವಾರ, ಜುಲೈ 3, 2022
27 °C

ಭಾರತಕ್ಕೆ ಜುಮ್ಲಾ, ಚೀನಾಗೆ ಉದ್ಯೋಗ; ಬಿಜೆಪಿ 'ಬೀಜಿಂಗ್ ಜನತಾ ಪಕ್ಷ': ಕಾಂಗ್ರೆಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

'ಜುಮ್ಲಾ ಫಾರ್ ಇಂಡಿಯಾ, ಜಾಬ್ಸ್ ಫಾರ್ ಚೀನಾ' (ಭಾರತಕ್ಕೆ ಸುಳ್ಳು ಭರವಸೆ, ಚೀನಾಗೆ ಉದ್ಯೋಗ) ಎಂದು ರಾಹುಲ್ ಗಾಂಧಿ ಟೀಕಿಸಿದರೆ ಬಿಜೆಪಿಯನ್ನು 'ಬೀಜಿಂಗ್ ಜನತಾ ಪಕ್ಷ' ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ.

ಇದನ್ನೂ ಓದಿ: 

'ಭಾರತಕ್ಕೆ ಜುಮ್ಲಾ, ಚೀನಾಗೆ ಉದ್ಯೋಗ, ಮೋದಿ ಸರ್ಕಾರವು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಅಸಂಘಟಿತ ವಲಯ ಮತ್ತು ಎಂಎಸ್‌ಎಂಇಗಳನ್ನು ನಾಶಪಡಿಸಿದೆ. ಪರಿಣಾಮ 'ಮೇಕ್ ಇನ್ ಇಂಡಿಯಾ' ಈವಾಗ 'ಬಯ್ ಫ್ರಮ್ ಚೀನಾ' (ಚೀನಾದಿಂದ ಖರೀದಿಸಿ) ಆಗಿದೆ' ಎಂದು ರಾಹುಲ್ ಗಾಂಧಿ ಆರೋಪಿಸಿದರು.

 

 

 

ರಾಷ್ಟ್ರಪತಿ ಭಾಷಣಕ್ಕೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿದ್ದಾರೆ. 'ಪ್ರಧಾನ ಮಂತ್ರಿ ಮೇಕ್ ಇನ್ ಇಂಡಿಯಾ ಭರವಸೆ ನೀಡಿದ್ದಾರೆ. ಆದರೆ ಚೀನಾದಿಂದ ಮಾತ್ರ ಖರೀದಿಸಿ' ಎಂದು ಬಿಜೆಪಿ ನೀತಿಯನ್ನು ಟೀಕಿಸಿದ್ದಾರೆ. '2021ರಲ್ಲಿ ಚೀನಾದಿಂದ ಆಮದಿನಲ್ಲಿ ದಾಖಲೆಯ ಶೇ 46ರಷ್ಟು ಏರಿಕೆಯಾಗಿದೆ. ನಿರುದ್ಯೋಗವು ಭಾರತದಲ್ಲಿ ಎಲ್ಲ ದಾಖಲೆಗಳನ್ನು ಮುರಿದಿದೆ. ಚೀನಾ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ. ಆದರೆ ಮೋದಿ ಸರ್ಕಾರವು ಚೀನಾದ ಅಭಿವೃದ್ಧಿಯನ್ನು ಖಾತ್ರಿಪಡಿಸುತ್ತಿದೆ' ಎಂದು ಆರೋಪಿಸಿದರು.

 

ರಾಹುಲ್ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಖರ್ಗೆ, 'ಬೀಜಿಂಗ್ ಜನತಾ ಪಕ್ಷವು ನಮ್ಮ ಭೂಮಿಯನ್ನು ಚೀನಾಗೆ ಶರಣಾಗತಿ ಮಾಡಿದ್ದಲ್ಲದೆ ನಮ್ಮ ಆರ್ಥಿಕತೆಯನ್ನು ಒಪ್ಪಿಸಿದೆ' ಎಂದು ವಾಗ್ದಾಳಿ ನಡೆಸಿದರು.

 

 

 

'ಒಂದು ಕಡೆ ನಮ್ಮ ದೇಶದ ಬಡವರ ಮನೆಗಳನ್ನು ನೆಲಸಮಗೊಳಿಸುತ್ತಿದೆ. ಮತ್ತೊಂದೆಡೆ ಚೀನಾ ನಮ್ಮ ನೆಲದಲ್ಲಿ ಮನೆಗಳನ್ನು ನಿರ್ಮಿಸಿದಾಗ ಮೌನವಾಗಿರುತ್ತದೆ. ಇದು ಯಾವ ಸೀಮೆಯ ರಾಷ್ಟ್ರೀಯತೆ?' ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಶ್ನಿಸಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು