ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಏಜೆನ್ಸಿಗಳು ಲಸಿಕೆ ಅಕ್ರಮ ಮಾರಾಟ-ಸಂಗ್ರಹಣೆಯತ್ತ ಗಮನಹರಿಸಲಿ: ಕಾಂಗ್ರೆಸ್

Last Updated 19 ಏಪ್ರಿಲ್ 2021, 16:45 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರವು ತನಿಖಾ ಏಜೆನ್ಸಿಗಳಾದ ಎನ್‌ಐಎ, ಸಿಬಿಐ ಮತ್ತು ಇಡಿಗಳನ್ನು 'ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಬಳಸಿಕೊಳ್ಳುವ' ಬದಲು ಕೊರೊನಾ ವೈರಸ್ ಚಿಕಿತ್ಸೆಗೆ ಬಳಸುವ ಔಷಧಿಗಳ ಅಕ್ರಮ ಮಾರಾಟ ಮತ್ತು ಸಂಗ್ರಹಣೆದಾರರ ಮೇಲೆ ಗಮನಹರಿಸಬೇಕು ಎಂದು ಕಾಂಗ್ರೆಸ್ ಸೋಮವಾರ ಹೇಳಿದೆ.

ಇದು ಅವರ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್‌ ಹೇಳಿದ್ದಾರೆ.

'ಲಸಿಕೆಗಳು, ಇಂಜೆಕ್ಷನ್ ಮತ್ತು ಔಷಧಗಳ ಸಂಗ್ರಹಣೆ ಮತ್ತು ಕಾನೂನುಬಾಹಿರ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಚುಚ್ಚುಮದ್ದು ಮತ್ತು ಲಸಿಕೆಗಳ ಕಾನೂನುಬಾಹಿರ ಮಾರಾಟಗಾರರು ಮತ್ತು ಸಂಗ್ರಹಿಸುವವರ ವಿರುದ್ಧ ಸರ್ಕಾರ ಎನ್‌ಐಎ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಕ್ರಮಕೈಗೊಳ್ಳುವಂತೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.

'ನಿಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ನೀವು ಅವುಗಳನ್ನು ಬಳಸುತ್ತಿರುವಾಗ, ಇಂದು ದೇಶದಲ್ಲಿ ಈ ಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಕಪ್ಪು-ಮಾರುಕಟ್ಟೆದಾರರು ಮತ್ತು ಸಂಗ್ರಹಕಾರರ ವಿರುದ್ಧ ಅವುಗಳನ್ನು ಏಕೆ ಸೂಕ್ಷ್ಮವಾಗಿ ಬಳಸಿಕೊಳ್ಳಬಾರದು?' ಅವರು ಹೇಳಿದರು.

ಕೊರೊನಾ ವೈರಸ್ ಚಿಕಿತ್ಸೆಗೆ ಬಳಸಲಾಗುವ ರೆಮ್‌ಡಿಸಿವಿರ್ ಅನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಆರೋಪದ ಮೇಲೆ ಸ್ಥಳೀಯ ಪೊಲೀಸರು ಫಾರ್ಮಾ ಕಂಪನಿಯ ಉನ್ನತ ಕಾರ್ಯನಿರ್ವಾಹಕರಿಗೆ ಸಮನ್ಸ್ ನೀಡಿದಾಗ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಇತರ ಬಿಜೆಪಿ ನಾಯಕರೊಂದಿಗೆ ಪೊಲೀಸ್ ಠಾಣೆಯನ್ನು 'ಪಿಕೆಟಿಂಗ್' ಮಾಡಿದ್ದಾರೆ ಎಂದು ಚವಾಣ್ ಟೀಕಿಸಿದರು.

ಕೊರಾನಾ ವೈರಸ್ ಚಿಕಿತ್ಸೆಯಲ್ಲಿ ನಿರ್ಣಾಯಕವಾದ ರೆಮ್‌ಡಿಸಿವಿರ್ ಔಷಧದ ಸಾವಿರಾರು ಡೋಸ್‌ಗಳನ್ನು ದೇಶದಿಂದ ಹೊರಗೆ ಕಳುಹಿಸಲಾಗುತ್ತಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಶನಿವಾರ ರಾತ್ರಿ ರೆಮ್‌ಡಿಸಿವಿರ್ ತಯಾರಿಸುವ ದಮನ್ ಮೂಲದ ಔಷಧ ತಯಾರಿಕಾ ಕಂಪನಿಯ ಬ್ರಕ್ ಫಾರ್ಮಾ ನಿರ್ದೇಶಕ ರಾಜೇಶ್ ಡೊಕಾನಿಯಾ ಅವರನ್ನು ಪ್ರಶ್ನಿಸಿದ್ದಾರೆ.

ಇದರ ಬಗ್ಗೆ ತಿಳಿದ ಫಡಣವೀಸ್ ಮತ್ತು ಪ್ರವೀಣ್ ದಾರೇಕರ್ ಅವರು ಪೊಲೀಸ್ ಠಾಣೆಗೆ ಧಾವಿಸಿದ್ದರು. ಇದು ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿಗೆ ಕಾರಣವಾಗಿದೆ.

'ರೆಮ್‌ಡಿಸಿವಿರ್‌ನ ಅಕ್ರಮ ಮಾರಾಟಕ್ಕಾಗಿ ಗುಜರಾತ್ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಪ್ರಶ್ನಿಸಿದಾಗ, ಕೆಲವು ಬಿಜೆಪಿ ಮುಖಂಡರೊಂದಿಗೆ ಫಡಣವೀಸ್ ಅವರು ಪೊಲೀಸ್ ಠಾಣೆಗೆ ಘೇರಾವ್ ಮಾಡುತ್ತಾರೆ. ನೀವು ಸಾರ್ವಜನಿಕರಿಗೆ ಅಥವಾ ಅಕ್ರಮ ಮಾರಾಟದಾರರಿಗೆ ಸಹಾಯ ಮಾಡಲು ನೀವು ಬಯಸುವಿರಾ' ಎಂದು ಚವಾಣ್ ಪ್ರಶ್ನಿಸಿದ್ದಾರೆ.

'ಈ ವಿಚಾರದಲ್ಲಿ ನಾವು ರಾಜಕೀಯ ಮಾಡಬಾರದು ಮತ್ತು ದೇಶ ಹಾಗೂ ಜನರಿಗೆ ಸಹಾಯ ಮಾಡೋಣ'. ಲಸಿಕೆ ಸರಬರಾಜು ಕುರಿತು ಕೇಂದ್ರವು ಯೋಜನೆಯನ್ನು ರೂಪಿಸಬೇಕು ಮತ್ತು ಅದರ ಬಗ್ಗೆ ಪಾರದರ್ಶಕವಾಗಿರಬೇಕು. ಲಸಿಕೆಗಳನ್ನು ರಫ್ತು ಮಾಡುವುದನ್ನು ಮೊದಲೇ ನಿಷೇಧಿಸಬೇಕಾಗಿತ್ತು. ಸರ್ಕಾರವು ಉತ್ಪಾದನೆಯನ್ನು ಹೆಚ್ಚಿಸಬೇಕು. ಲಕಿಸೆ ಮತ್ತು ರೆಮ್‌ಡಿಸಿವಿರ್‌ಗೆ ಪಾರದರ್ಶಕ ಯೋಜನೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT