ಬುಧವಾರ, ಮೇ 18, 2022
26 °C
ಮಾ ಯೋಜನೆಗೆ ಮಮತಾ ಬ್ಯಾನರ್ಜಿ ಚಾಲನೆ

ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ₹5ಕ್ಕೆ ಊಟ: ಮಮತಾ ಬ್ಯಾನರ್ಜಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರಿಗೆ ಅತೀ ಕಡಿಮೆ ವೆಚ್ಚದಲ್ಲಿ ಅಂದರೆ, ಕೇವಲ ₹5ಕ್ಕೆ ಊಟ ನೀಡುವ ‘ಮಾ’ ಯೋಜನೆಗೆ ಸೋಮವಾರ ವಿಡಿಯೊ ಮೂಲಕ ಚಾಲನೆ ನೀಡಿದರು.

ಒಂದು ಪ್ಲೇಟ್‌ ಅನ್ನ, ಬೇಳೆ, ತರಕಾರಿ ಮತ್ತು ಮೊಟ್ಟೆ ಸಾಂಬಾರ್ ₹5ಕ್ಕೆ ನೀಡಲಾಗುವುದು. ಪ್ರತಿ ಪ್ಲೇಟ್‌ ಊಟಕ್ಕೆ ರಾಜ್ಯ ಸರ್ಕಾರ ₹15 ಸಬ್ಸಿಡಿ ಮೊತ್ತವನ್ನು ಭರಿಸಲಿದೆ ಎಂದು ಅವರು ತಿಳಿಸಿದರು.

‘ಮಾ’ ಯೋಜನೆಯ ಅಡುಗೆಮನೆಗಳನ್ನು ಸ್ವಸಹಾಯ ಶಕ್ತಿ ಗುಂಪುಗಳು ನಿರ್ವಹಿಸಲಿವೆ. ಪ್ರತಿ ದಿನ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಊಟವನ್ನು ನೀಡಲಾಗುತ್ತದೆ. ರಾಜ್ಯದ ಎಲ್ಲ ಕಡೆಯೂ ‘ಮಾ’ ಯೋಜನೆಯ ಅಡುಗೆ ಮನೆಗಳನ್ನು ಆರಂಭಿಸಲಾಗುವುದು ಎಂದು ಮಮತಾ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು