ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ನೀಡುವಿಕೆಗೆ ವೇಗ ತುಂಬಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌

ಕೋವಿಡ್‌ ಸಾಂಕ್ರಾಮಿಕ ನಿಯಂತ್ರಣ: ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಮನಮೋಹನ್‌ ಪತ್ರ ಮೂಲಕ ಸಲಹೆ
Last Updated 18 ಏಪ್ರಿಲ್ 2021, 18:33 IST
ಅಕ್ಷರ ಗಾತ್ರ

ನವದೆಹಲಿ: ‘ಲಸಿಕಾ ಕಾರ್ಯಕ್ಕೆ ಇನ್ನಷ್ಟು ವೇಗ ತುಂಬುವುದೊಂದೇ ಕೋವಿಡ್‌ ಪಿಡುಗಿನ ನಿಯಂತ್ರಣಕ್ಕೆ ಇರುವ ದಾರಿ. ಸರ್ಕಾರವು ಇಂತಿಷ್ಟು ಮಂದಿಗೆ ಲಸಿಕೆ ನೀಡಿದ್ದೇವೆ ಎಂದು ಸಂಖ್ಯೆ ಹೇಳುವುದಕ್ಕಿಂತ, ಶೇಕಡಾವಾರು ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದಾರೆ.

ಕೋವಿಡ್‌ ನಿರ್ವಹಣೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿರುವ ಅವರು ಐದು ಪ್ರಮುಖ ಸಲಹೆಗಳನ್ನು ನೀಡಿ ದ್ದಾರೆ. ‘ಲಸಿಕೆ ನೀಡಿಕೆಯಲ್ಲಿ ಸಂಖ್ಯೆಗಿಂತ ಶೇಕಡಾವಾರು ಪ್ರಮಾಣದತ್ತ ಗಮನ ಹರಿಸಬೇಕು. ಜನಸಂಖ್ಯೆಯ ಸಣ್ಣ ಪ್ರಮಾಣದ ಜನರಿಗಷ್ಟೇ ಲಸಿಕೆ ನೀಡಲು ನಮಗೆ ಸಾಧ್ಯವಾಗಿದೆ. ನಾವು ಇದಕ್ಕಿಂತ ವೇಗವಾಗಿ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡಬಲ್ಲೆವು’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

‘ಲಸಿಕೆ ನೀಡುವ ವಿಚಾರದಲ್ಲಿ ರಾಜ್ಯಗಳಿಗೆ ಇನ್ನಷ್ಟು ಸ್ವಾತಂತ್ರ್ಯ ನೀಡ ಬೇಕು. ಕೆಲವು ರಾಜ್ಯಗಳು ವಕೀಲರು, ಟ್ಯಾಕ್ಸಿ–ಬಸ್‌ ಚಾಲಕರು, ಶಿಕ್ಷಕರು, ನಗರಸಭೆ, ಪಂಚಾಯಿತಿ ಸಿಬ್ಬಂದಿ... ಹೀಗೆ ಬೇರೆಬೇರೆ ವರ್ಗದವರನ್ನು ಮುಂಚೂಣಿ ಹೋರಾಟಗಾರರೆಂದು ಪರಿಗಣಿಸಿ, ಲಸಿಕೆ ನೀಡಲು ಬಯಸ ಬಹುದು. ಇಂಥವರು 45 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ನೀಡಲು ಅವಕಾಶ ಕೊಡಬೇಕು.

‘ಕಾನೂನಿನಲ್ಲಿರುವ ‘ಕಡ್ಡಾಯ ಪರವಾನಗಿ’ ಅವಕಾಶವನ್ನು ಈಗ ಸರ್ಕಾರ ಬಳಸಿಕೊಳ್ಳಬೇಕು. ಇದರಿಂದ ಇನ್ನಷ್ಟು ಕಂಪನಿಗಳಿಗೆ ಲಸಿಕೆ ತಯಾರಿಸಲು ಅವಕಾಶ ಲಭಿಸುತ್ತದೆ. ಆ ಮೂಲಕ ಲಸಿಕೆಯ ಕೊರತೆಯನ್ನು ನೀಗಿಸಬಹುದಾಗಿದೆ. ಎಚ್‌ಐವಿ/ಏಡ್ಸ್‌ ಔಷಧ ತಯಾರಿಕೆಯ ವಿಚಾರದಲ್ಲಿ ಸರ್ಕಾರ ಹಿಂದೆ ಇಂಥ ಕ್ರಮ ಕೈಗೊಂ
ಡಿತ್ತು. ಇಸ್ರೇಲ್‌ ಸರ್ಕಾರವು ಈಗಾಗಲೇ ಇಂಥ ಕ್ರಮ ಕೈಗೊಂಡಿದೆ’ ಎಂದು ಅವರು ಸಲಹೆ ನೀಡಿದ್ದಾರೆ.

‘ದೇಶದಲ್ಲಿ ಲಸಿಕೆಯ ಕೊರತೆ ಇರುವುದರಿಂದ ದೇಶೀಯ ಪ್ರಯೋಗ ವನ್ನು ಕಡ್ಡಾಯಗೊಳಿಸದೆಯೇ, ಯುಎಸ್‌ ಎಫ್‌ಡಿಎ ಅಥವಾ ಯುರೋಪಿಯನ್‌ ಮೆಡಿಕಲ್‌ ಏಜನ್ಸಿಯಂಥ ಸಂಸ್ಥೆಗಳು ಪ್ರಮಾಣೀಕರಿಸಿದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಇಂಥ ಸಡಿಲಿಕೆ ಮಾಡಬಹುದು’ ಎಂದು ತಜ್ಞರು ಸಹ ಹೇಳುತ್ತಾರೆ ಎಂದು ಸಿಂಗ್‌ ಹೇಳಿದ್ದಾರೆ.

ಆಮ್ಲಜನಕ ಪೂರೈಕೆಗೆ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’

‘ದೇಶದ ವಿವಿಧ ಭಾಗಗಳಿಗೆ ತ್ವರಿತವಾಗಿ ವೈದ್ಯಕೀಯ ಆಮ್ಲಜನಕವನ್ನು ತಲುಪಿಸುವ ಉದ್ದೇಶದಿಂದ ಶೀಘ್ರದಲ್ಲೇ ‘ಆಕ್ಸಿಜನ್‌ ಎಕ್ಸ್‌ಪ್ರೆಸ್‌’ ರೈಲುಗಳನ್ನು ಆರಂಭಿಸಲಾಗುವುದು’ ಎಂದು ರೈಲ್ವೆ ಇಲಾಖೆ ಭಾನುವಾರ ತಿಳಿಸಿದೆ.

ದೇಶದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಉಂಟಾಗಿರುವುದರಿಂದ ತ್ವರಿತವಾಗಿ ಟ್ಯಾಂಕರ್‌ಗಳ ಮೂಲಕ ಆಮ್ಲಜನಕ ಸಾಗಾಣಿಕೆಗೆ ಇಲಾಖೆ ಮುಂದಾಗಿದೆ. ಶೀಘ್ರದಲ್ಲೇ ಮಹಾರಾಷ್ಟ್ರದಿಂದ ಖಾಲಿ ಟ್ಯಾಂಕರ್‌ಗಳೊಂದಿಗೆ ಜಾರ್ಖಂಡ್‌, ಆಂಧ್ರಪ್ರದೇಶ ಹಾಗೂ ಒಡಿಶಾಗೆ ಆಕ್ಸಿಜನ್‌ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಸಲಿವೆ. ಅಲ್ಲಿಂದ ಆಮ್ಲಜನಕವನ್ನು ತುಂಬಿಕೊಂಡು ರೈಲುಗಳು ಮುಂಬೈಗೆ ಮರಳಲಿವೆ. ‘ಕೋವಿಡ್ ವಿರುದ್ಧದ ಹೋರಾಟಕ್ಕೆ ಸಾಧ್ಯವಾಗುವ ಎಲ್ಲಾ ನೆರವನ್ನು ರೈಲ್ವೆ ಇಲಾಖೆ ನೀಡಲಿದೆ. ಗ್ರೀನ್‌ ಕಾರಿಡಾರ್‌ ಅನ್ನು ಬಳಸಿಕೊಂಡು ರೈಲ್ವೆ ಇಲಾಖೆಯು ಶೀಘ್ರದಲ್ಲಿ ಆಮ್ಲಜನಕವನ್ನು ಅಗತ್ಯ ರೋಗಿಗಳಿಗೆ ತಲುಪಿಸುವ ಕಾರ್ಯ ಮಾಡಲಿದೆ’ ಎಂದು ರೈಲ್ವೆ ಖಾತೆ ಸಚಿವ ಪೀಯೂಷ್‌ ಗೋಯಲ್‌ ಟ್ವೀಟ್‌ ಮಾಡಿದ್ದಾರೆ.

ಟ್ಯಾಂಕರ್‌ಗಳ ಮೂಲಕ ದ್ರವೀಕೃತ ವೈದ್ಯಕೀಯ ಆಮ್ಲಜನಕದ ಸಾಗಾಣಿಕೆ ನಡೆಯಲಿದೆ. ಆಮ್ಲಜನಕದ ಟ್ಯಾಂಕ್‌ಗಳನ್ನು ಹೊಂದಿರುವ ಟ್ರಕ್‌ಗಳನ್ನು ರೈಲ್ವೆ ವ್ಯಾಗನ್‌ಗಳ ಮೇಲಿಟ್ಟು ಸಾಗಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ರೈಲುಗಳ ಮೂಲಕ ಟ್ಯಾಂಕರ್‌ಗಳ ಸಾಗಾಣಿಕೆಯ ಸಾಧ್ಯತೆಯನ್ನು ಪರಿಶೀಲಿಸುವಂತೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸರ್ಕಾರಗಳು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT