ಮಂಗಳವಾರ, ಜುಲೈ 5, 2022
26 °C

ಛತ್ತೀಸ್‌ಗಢ ಎನ್‌ಕೌಂಟರ್: ಕಾರ್ಯಾಚರಣೆ ಬಳಿಕ 21 ಯೋಧರು ನಾಪತ್ತೆ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

DH File Photo

ಛತ್ತೀಸ್‌ಗಢದ ಸುಕ್ಮಾದಲ್ಲಿ ಶನಿವಾರ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯ ಬಳಿಕ ಕನಿಷ್ಠ 21 ಯೋಧರು ನಾಪತ್ತೆಯಾಗಿದ್ದಾರೆ.

ಕಾರ್ಯಾಚರಣೆ ನಡೆದ ಸ್ಥಳಕ್ಕೆ ಹೆಚ್ಚವರಿ ಭದ್ರತಾ ಪಡೆಯನ್ನು ಸರ್ಕಾರ ಕಳುಹಿಸಿಕೊಟ್ಟಿದೆ. ಈ ಸಂದರ್ಭದಲ್ಲಿ ಹುತಾತ್ಮರಾಗಿರುವ ಐವರು ಯೋಧರ ಪೈಕಿ ಇಬ್ಬರ ಶವ ಪತ್ತೆಯಾಗಿದೆ.

ಗಾಯಗೊಂಡಿರುವ ಯೋಧರ ಪೈಕಿ 23 ಮಂದಿಯನ್ನು ಬಿಜಾಪುರ್ ಆಸ್ಪತ್ರೆಗೆ ಮತ್ತು 7 ಮಂದಿಯನ್ನು ರಾಯ್ಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಛತ್ತೀಸ್‌ಗಢ ಪೊಲೀಸರು ತಿಳಿಸಿದ್ದಾರೆ.

ಯೋಧರ ಬಲಿದಾನಕ್ಕೆ ಸಲಾಂ

ಛತ್ತೀಸ್‌ಗಢದಲ್ಲಿ ಮಾವೋವಾದಿಗಳೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿರುವ ಯೋಧರ ಬಲಿದಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ದೇಶವು ಅವರ ಬಲಿದಾನವನ್ನು ಎಂದಿಗೂ ಮರೆಯದು, ಅವರ ಕುಟುಂಬದ ಜತೆ ನಾವಿದ್ದೇವೆ. ವೈರಿಗಳ ವಿರುದ್ದದ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು