ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ಭಾರತದ ಅತ್ಯಾಚಾರ ರಾಜಧಾನಿಯಾಗುತ್ತಿದೆ: ಮಾಜಿ ಸಿಎಂ ಕಮಲ್ ನಾಥ್

Last Updated 4 ಅಕ್ಟೋಬರ್ 2020, 15:15 IST
ಅಕ್ಷರ ಗಾತ್ರ

ಜಬಲಾಪುರ: ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ರಾಜ್ಯವು 'ದೇಶದ ಅತ್ಯಾಚಾರ ರಾಜಧಾನಿಯಾಗಿ' ಬದಲಾಗುತ್ತಿದೆ ಎಂದು ಹೇಳಿದ್ದಾರೆ.

ಜಬಲ್‌ಪುರದ ಬಾಗಲಮುಖಿ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಮಧ್ಯಪ್ರದೇಶವು ಇದೀಗ ಭಾರತದ ಅತ್ಯಾಚಾರ ರಾಜಧಾನಿಯಾಗಿ ಬದಲಾಗುತ್ತಿದೆ. ಯುವಕರು, ರೈತರು ಮತ್ತು ವ್ಯಾಪಾರಿಗಳು ತೊಂದರೆಗೀಡಾಗಿದ್ದರೆ, ಮಹಿಳೆಯರು ಅಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಇಲ್ಲಿನ ಪ್ರತಿ ವಿಭಾಗವೂ ತೊಂದರೆಗೀಡಾಗಿದೆ' ಎಂದು ಹೇಳಿದರು.

ಸರ್ಕಾರ ರಚನೆಗೆ ಯಾವ ರೀತಿ ಕುದುರೆ ವ್ಯಾಪಾರ ಮಾಡಬಹುದು ಎನ್ನುವುದಕ್ಕೆ ಮಧ್ಯಪ್ರದೇಶವು ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವ ಮುಳುಗುತ್ತಿದೆ, ಸಂವಿಧಾನ ಮುಳುಗುತ್ತಿದೆ ಮತ್ತು ಮಧ್ಯಪ್ರದೇಶವೂ ಮುಳುಗುತ್ತಿದೆ ಎಂದು ಆರೋಪಿಸಿದರು.

'ಮುಂಬರುವ ಉಪಚುನಾವಣೆಗಳಲ್ಲಿಯೂ ಅವರು ಅದೇ ರೀತಿ ಮಾಡುತ್ತಾರೆ. ಆದರೆ ಆ ಪಾಠ ತಾತ್ಕಾಲಿಕವಾಗಿತ್ತು. ಶಿವರಾಜ್ (ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್) ಅವರು ಕಳೆದ ಏಳು ತಿಂಗಳಿಂದ ಜನರನ್ನು ಲೂಟಿ ಮಾಡುತ್ತಿದ್ದಾರೆ. ಅವರು ಸರಳ ಮತ್ತು ನಿಷ್ಕಪಟವಾಗಿರಬಹುದು, ಆದರೆ ದಡ್ಡರಲ್ಲ. 'ಸಾರ್ವಜನಿಕರು ಹೇಗೆ ಮೋಸ ಹೋಗಿದ್ದಾರೋ, ಅದೇ ರೀತಿಯಲ್ಲಿ ಅವರು ಉತ್ತರಿಸುತ್ತಾರೆ (ಬಿಜೆಪಿಗೆ ಮುಂಬರುವ ಉಪಚುನಾವಣೆಯಲ್ಲಿ) ಎಂದಿದ್ದಾರೆ.

25 ಶಾಸಕರ ರಾಜೀನಾಮೆ ಮತ್ತು ಮೂವರು ಶಾಸಕರ ನಿಧನದ ನಂತರ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3 ರಂದು ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶ ಲಭ್ಯವಾಗಲಿದೆ.

ಬಿಜೆಪಿ ನಾಯಕನ ಕಿಡಿ

ಮಾಜಿ ಮುಖ್ಯಮಂತ್ರಿ ಕಮಲ ನಾಥ್ ಅವರು ಬಾಗಲಮುಖಿ ದೇಗುಲಕ್ಕೆ ಭೇಟಿ ನೀಡಿದ್ದನ್ನು ಟೀಕಿಸಿರುವ ಬಿಜೆಪಿ ಮುಖಂಡ ರಾಕೇಶ್ ಸಿಂಗ್, ಕಾಂಗ್ರೆಸ್ ಮತ್ತು ಅವರ ನಾಯಕರಿಗೆ ಚುನಾವಣೆಯು ಹತ್ತಿರ ಬರುತ್ತಿದ್ದಂತೆ ದೇಗುಲಗಳಿಗೆ ಹೋಗುತ್ತಾರೆ ಎಂದು ಟೀಕಿಸಿದ್ದಾರೆ.

ಅವರು ಅದನ್ನು ಬಳಸುವುದಿಲ್ಲ (ದೇವಸ್ಥಾನಕ್ಕೆ ಹೋಗುವುದು); ಆದ್ದರಿಂದ ತಪ್ಪುಗಳನ್ನು ಮಾಡುತ್ತಾರೆ. ಇಂದಿಗೂ ಅವರು (ನಾಥ) ಆಚರಣೆಗಳನ್ನು ಮಾಡುವಾಗ ತಪ್ಪುಗಳನ್ನು ಮಾಡಿದ್ದಾರೆ. ದೇವರು ಕೂಡ ಅವರೊಂದಿಗೆ ಇಲ್ಲ ಎಂದಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT